simple aag ondh love story: ಸುನಿ ಸಿಂಪಲ್ ಆಗಿ ಹತ್ತು ವರ್ಷ, ಹೇಗಿತ್ತು ಸಿನಿಮಾ ಬಿಡುಗಡೆ ಆದ ಆ ಮೊದಲ ದಿನ?
ನಿರ್ದೇಶಕ ಸಿಂಪಲ್ ಸುನಿ, ನಟ ರಕ್ಷಿತ್ ಶೆಟ್ಟಿ ಸೇರಿ ಹಲವರ ಬಾಳಿಕೆ ಬೆಳಕಾದ ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಸಿನಿಮಾ ಬಿಡುಗಡೆ ಆಗಿ ಇಂದಿಗೆ 10 ವರ್ಷ. ಸಿನಿಮಾ ಬಿಡುಗಡೆ ಆದ ಮೊದಲ ದಿನದ ಅನುಭವ ಹೇಗಿತ್ತು? ಸಿಂಪಲ್ ಸುನಿ ಮಾತಲ್ಲೇ ಕೇಳಿ.
ಕನ್ನಡ ಚಿತ್ರರಂಗದ ಯಶಸ್ವಿ ಹಾಗೂ ಪ್ರತಿಭಾವಂತ ನಿರ್ದೇಶಕರಲ್ಲೊಬ್ಬರಾದ ಸಿಂಪಲ್ ಸುನಿಗೆ ಇಂದು (ಮಾರ್ಚ್ 08) ವಿಶೇಷ ದಿನ. ಅವರ ನಿರ್ದೇಶನದ ಮೊದಲ ಸಿನಿಮಾ ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಬಿಡುಗಡೆ ಆಗಿ ಇಂದಿಗೆ 10 ವರ್ಷ. ಬರೀ ಸುನಿ ಆಗಿದ್ದವರು ಆ ಸಿನಿಮಾ ಬಿಡುಗಡೆ ಆದ ಬಳಿಕ ಸಿಂಪಲ್ ಸುನಿ ಆದರು. ತಮ್ಮ ಮೊದಲ ಸಿನಿಮಾ ಬಿಡುಗಡೆ ಆದ ಮೊದಲ ದಿನ ಹೇಗಿತ್ತು ಎಂಬುದನ್ನು ಅವರು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
Published on: Mar 08, 2023 11:44 PM