Truce Established: ವಿಜಯಪುರದ ಪಾಟೀಲರ ನಡುವೆ ರಾಜಿ ಸಂಧಾನ ಮಾಡಿಸುವಲ್ಲಿ ಯಶಕಂಡ ರಾಜ್ಯ ಕಾಂಗ್ರೆಸ್ ವರಿಷ್ಠರು
ವಿಧಾನಸಭಾ ಚುನಾವಣೆ ನೆತ್ತಿಯ ಮೇಲಿರುವುದರಿಂದ ಪಕ್ಷದ ನಾಯಕರ ನಡುವೆ ವಿರಸ, ವೈಮನಸ್ಸುಗಳು ಸರಿಯಲ್ಲ ಅನ್ನೊದನ್ನು ಮನಗಂಡ ಪಕ್ಷದ ನಾಯಕರು ಸೇರಿ ವಿಜಯಪುರದ ಪಾಟೀಲರ ನಡುವೆ ರಾಜಿ ಸಂಧಾನ ಮಾಡಿಸುವಲ್ಲಿ ಸಫಲರಾಗಿದ್ದಾರೆ.
ವಿಜಯಪುರ: ಎಲ್ಲರೂ ಪಾಟೀಲರೇ, ಆದರೆ ಅದ್ಯಾವದೋ ಕಾರಣಕ್ಕೆ ವಿಜಯಪುರದ ಮೂವರು ಪ್ರಮುಖ ನಾಯಕರ ನಡುವೆ ವೈಮನಸ್ಸು ಉಂಟಾಗಿತ್ತು. ನಾವು ಎಮ್ ಬಿ ಪಾಟೀಲ್ (MB Patil), ಶಿವಾನಂದ ಪಾಟೀಲ್ (Shivanand Patil) ಮತ್ತು ಯಶವಂತರಾಯಗೌಡ ಪಾಟೀಲ್ (Yashvanthraya Gouda Patil) ಬಗ್ಗೆ ಮಾತಾಡುತ್ತಿದ್ದೇವೆ. ಬಹಳ ವರ್ಷಗಳಿಂದ ಇವರ ನಡುವೆ ಮಾತುಕತೆಯಿರಲಿಲ್ಲ. ವಿಧಾನಸಭಾ ಚುನಾವಣೆ ನೆತ್ತಿಯ ಮೇಲಿರುವುದರಿಂದ ಪಕ್ಷದ ನಾಯಕರ ನಡುವೆ ವಿರಸ, ವೈಮನಸ್ಸುಗಳು ಸರಿಯಲ್ಲ ಅನ್ನೊದನ್ನು ಮನಗಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಹಿರಿಯ ನಾಯಕ ಸಿದ್ದರಾಮಯ್ಯ ಮತ್ತು ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಮತ್ತು ಇತರ ನಾಯಕರು ಸೇರಿ ವಿಜಯಪುರದ ಪಾಟೀಲರ ನಡುವೆ ರಾಜಿ ಸಂಧಾನ ಮಾಡಿಸುವಲ್ಲಿ ಸಫಲರಾಗಿದ್ದಾರೆ. ಎಲ್ಲ ಸರಿಯಾದ ಮೇಲೆ ಗ್ರೂಪ್ ಫೋಟೋ ತೋ ಬನ್ತಾ ಹೈ ಅಂತ ಕೆಮೆರಾಗೆ ಪೋಸು ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 09, 2023 10:38 AM
Latest Videos