Assembly Polls; ಅಥಣಿ ಜನತೆ ನಾನು ಸ್ಪರ್ಧಿಸಬೇಕು ಅನ್ನುತ್ತಿದೆ, ನಿರ್ಧಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು: ಲಕ್ಷ್ಮಣ ಸವದಿ, ಬಿಜೆಪಿ ಶಾಸಕ

Assembly Polls; ಅಥಣಿ ಜನತೆ ನಾನು ಸ್ಪರ್ಧಿಸಬೇಕು ಅನ್ನುತ್ತಿದೆ, ನಿರ್ಧಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು: ಲಕ್ಷ್ಮಣ ಸವದಿ, ಬಿಜೆಪಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 09, 2023 | 11:40 AM

ಬಹಳ ದಿನಗಳ ನಂತರ ಮಾಧ್ಯಮದ ಮುಂದೆ ಬರುತ್ತಿರುವ ಸವದಿಗೆ ಈ ಬಾರಿ ಟಿಕೆಟ್ ಸಿಗೋದು ಅನುಮಾನ ಅಂತ ಹೇಳಲಾಗುತ್ತಿದೆ. ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಸವದಿ ಟಿಕೆಟ್ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಲಿಲ್ಲ.

ಬೆಳಗಾವಿ: ಬೆಳಗಾವಿ ಜಿಲ್ಲಾ ಬಿಜೆಪಿ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಮತ್ತು ಇದು ಪಕ್ಷದ ವರಿಷ್ಠರಿಗೂ ಗೊತ್ತಿರುವ ಸಂಗತಿ. ಬಿಎಸ್ ಯಡಿಯೂರಪ್ಪ (BS Yediyurappa) ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ (Laxman Savadi) ಮತ್ತು ರಮೇಶ್ ಜಾರಕಿಹೊಳಿ (Ramesh Jarkiholi) ನಡುವೆ ವೈಮನಸ್ಸಿದೆ. ಬಹಳ ದಿನಗಳ ನಂತರ ಮಾಧ್ಯಮದ ಮುಂದೆ ಬರುತ್ತಿರುವ ಸವದಿಗೆ ಈ ಬಾರಿ ಟಿಕೆಟ್ ಸಿಗೋದು ಅನುಮಾನ ಅಂತ ಹೇಳಲಾಗುತ್ತಿದೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಸವದಿ ಟಿಕೆಟ್ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಲಿಲ್ಲ. ಅಥಣಿ ಕ್ಷೇತ್ರದ ಜನ ತಾನು ಸ್ಪರ್ಧಿಸಬೇಕು ಅನ್ನುತ್ತಿದ್ದಾರೆ, ಪಕ್ಷದ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೋ ನೋಡಬೇಕು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 09, 2023 11:39 AM