ಬೆಳಗಾವಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ವಿರುದ್ಧ ಬೆಳಗಾವಿ ಮೂಲ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಭುಸುಗುಡುತ್ತಿದ್ದಾರೆ. ಅಥಣಿ ಶಾಸಕ ಲಕ್ಷ್ಮಣ ಸವದಿಯವರು (Laxman Savadi) ರಮೇಶ್ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ಈರಣ್ಣ ಕಡಾಡಿಯವರು (Eranna Kadadi) ಸಹ ರಮೇಶ್ ಧೋರಣೆಗಳ ಬಗ್ಗೆ ಬೇಜಾರು ಮಾಡಿಕೊಂಡಿರುವುದು ಅವರ ಮಾತುಗಳಿಂದ ಗೊತ್ತಾಗುತ್ತದೆ. ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ರಮೇಶ್ ತಮ್ಮ ಕ್ಷೇತ್ರದಲ್ಲಿ ಸರ್ಕಾರೀ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ, ರಾಜ್ಯಸಭಾ ಸದಸ್ಯನನ್ನು, ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸುವ ಸೌಜನ್ಯತೆಯೂ ಅವರಿಗಿಲ್ಲ, ಅವರ ವರ್ತನೆಯಿಂದ ಪಕ್ಷದ ಇಮೇಜಿಗೆ ಧಕ್ಕೆಯುಂಟಾಗುತ್ತಿದೆ ಎಂದು ಕಡಾಡಿ ಹೇಳಿದರು. ಕಳೆದ ವಾರ ಗೋಕಾಕನಲ್ಲಿ ಘಟ್ಟಿ ಬಸವಣ್ಣ ಆಣೆಕಟ್ಟು ನಿರ್ಮಾಣಕ್ಕೆ ರಮೇಶ್ ಜಾರಕಿಹೊಳಿಯವರು ಭೂಮಿಪೂಜೆ ನಡೆಸಿದ್ದು ಕಾರ್ಯಕ್ರಮಕ್ಕೆ ಸಂಸದರನ್ನು ಆಹ್ವಾನಿಸಿರಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ