Simple Suni: ಪುನೀತ್ಗೆ ಹೇಳಿದ್ದ ಕಥೆ ಈಗ ವಿನಯ್ಗಾಗಿ ಹೇಗೆಲ್ಲ ಬದಲಾಗಿದೆ? ಇಲ್ಲಿದೆ ಸುನಿ ನೀಡಿದ ಉತ್ತರ..
Ondu Sarala Premakathe | Vinay Rajkumar: ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಸೆಟ್ಟೇರಿದೆ. ಈ ಕಥೆಯನ್ನು ಮೊದಲು ಪುನೀತ್ ರಾಜ್ಕುಮಾರ್ ಕೇಳಿದ್ದರು. ಈಗ ಅದೇ ಸ್ಕ್ರಿಪ್ಟ್ ವಿನಯ್ ರಾಜ್ಕುಮಾರ್ ಪಾಲಾಗಿದೆ.
ನಿರ್ದೇಶಕ ಸಿಂಪಲ್ ಸುನಿ ಅವರು ‘ಒಂದು ಸರಳ ಪ್ರೇಮಕಥೆ’ (Ondu Sarala Premakathe) ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ವಿನಯ್ ರಾಜ್ಕುಮಾರ್ (Vinay Rajkumar) ಹೀರೋ. ಆದರೆ ಮೊದಲು ಈ ಕಥೆಯನ್ನು ಹೇಳಿದ್ದು ಪುನೀತ್ ರಾಜ್ಕುಮಾರ್ಗೆ. ಈಗ ಅದೇ ಕಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿದೆ. ಯಾವೆಲ್ಲ ಬದಲಾವಣೆ ಆಗಿದೆ ಎಂಬುದನ್ನು ಸಿಂಪಲ್ ಸುನಿ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ‘ನಾನು ಮೊದಲಿಂದಲೂ ದೊಡ್ಮನೆ ಅಭಿಮಾನಿ. ಶಿವರಾಜ್ಕುಮಾರ್ ಜೊತೆ ಸಿನಿಮಾ ಮಾಡಬೇಕಿತ್ತು. ಅದು ಕೈಗೂಡಲಿಲ್ಲ. ಈಗ ವಿನಯ್ ರಾಜ್ಕುಮಾರ್ ಜೊತೆ ಕೆಲಸ ಮಾಡುತ್ತಿದ್ದೇನೆ. ಲೊಕೇಷನ್ ಸೇರಿದಂತೆ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ’ ಎಂದು ಸಿಂಪಲ್ ಸುನಿ (Simple Suni) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Mar 09, 2023 02:19 PM