ಮಂಡ್ಯ: ಮಾರ್ಚ್ 12ಕ್ಕೆ ಮಂಡ್ಯಕ್ಕೆ ಪ್ರಧಾನಿ ಮೋದಿ (Prime Minister Modi) ಬರುತ್ತಿದ್ದಾರೆ, ನಾನು ಅಲ್ಲಿಗೆ ಬಂದೇ ಬರುವೇ ಎಂದು ವೃದ್ದೆಯೊಬ್ಬರು ಮೋದಿಯನ್ನು ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಮೋದಿ ನನಗೆ ಹಣ ಹಾಕಿ ಸಹಾಯ ಮಾಡಿದ್ದಾರೆ. ಇದೀಗ ಈ ವಿಡಿಯೊ ಎಲ್ಲ ಕಡೆ ವೈರಲ್ ಆಗುತ್ತಿದೆ. ಈ ವಿಡಿಯೊದಲ್ಲಿ ವೃದ್ದೆಯೊಬ್ಬರು ಹಾಲು ಕರೆಯುತ್ತ ಮೋದಿ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಉಪ್ಪರಕನಹಳ್ಳಿ ಗ್ರಾಮದ ವೀರಾಜಮ್ಮ ಮೋದಿಯನ್ನು ನಾನು ನೋಡಬೇಕು, ಈ ಇಳಿ ವಯಸ್ಸಿನಲ್ಲಿ ಮೋದಿ ನೋಡುವ ಆಸೆ ಇದೆ. ತನ್ನ ಖಾತೆಗೆ ಮೋದಿ ಹಣ ಹಾಕಿ ಸಹಾಯ ಮಾಡಿದ್ದಾರೆ ಎಂದು ವೃದ್ದೆ ಮೋದಿಯನ್ನು ಕೊಂಡಾಡಿದ್ದಾರೆ. ಮಾರ್ಚ್ 12 ರಂದು ಮೋದಿ ಮಂಡ್ಯ ಬರುತ್ತಿದ್ದಾರೆ. ನಾನು ಅವರನ್ನು ನೋಡಲು ಅಲ್ಲಿಗೆ ತೆರಳುತ್ತೇನೆ ಎಂದ ಅಜ್ಜಿ ಹೇಳಿದ್ದಾರೆ. ಮಾರ್ಚ್ 12ಕ್ಕೆ ಪ್ರಧಾನಿ ಮೋದಿ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಅಲ್ಲಿ ಮೋದಿ ಅನೇಕ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಈಗಾಗಲೇ ಕಾರ್ಯಕ್ರಮಕ್ಕೆ ಸಿದ್ದತೆಗಳು ನಡೆಯುತ್ತಿದೆ.