ಬೆಂಗಳೂರು: ಮಾಡಾಳ್ ವಿರೂಪಾಕ್ಷಪ್ಪನವರ (Madal Virupakshappa) ವರಸೆ ನಿಮಿಷಕ್ಕೊಮ್ಮೆ ಬದಲಾಗುತ್ತಿದೆ. ಅದನ್ನು ಈ ವಿಡಿಯೋದಲ್ಲಿ ನೋಡಬಹುದು. ತಮ್ಮ ಮಗ ಹಾಗೂ ಖುದ್ದು ಅವರ ಮನೆಯಲ್ಲಿ ಸಿಕ್ಕ ಕೋಟ್ಯಾಂತರ ರೂಪಾಯಿ ಹಣದ ಬಗ್ಗೆ ವಿಚಾರಣೆ ಎದುರಿಸಲು ಇಂದು ಲೋಕಾಯುಕ್ತರ (Lokayukta) ಎದುರು ಹಾಜರಾಗುವ ಮೊದಲು ವಕೀಲರನ್ನು (lawyer) ಭೇಟಿಯಾಗಿ ಹೊರಬಂದ ಶಾಸಕರನ್ನು ಮಾಧ್ಯಮ ಪ್ರತಿನಿಧಿಗಳು ಸುತ್ತುವರಿದಾಗ, ಯಾರೂ ನನ್ನನ್ನು ಮುಟ್ಟುವ ಪ್ರಯತ್ನ ಮಾಡಬೇಡಿ, ನಾನು ಇನ್ನೂ ಶಾಸಕ ಅನ್ನೋದನ್ನು ಮರೀಬೇಡಿ ಅಂತ ಹೆದರಿಸಲು ಪ್ರಯತ್ನಿಸುತ್ತಾರೆ. ನಂತರ ಎರಡೂ ಕೈಗಳನ್ನು ಮುಗಿದು ದಯವಿಟ್ಟು ಸದ್ಯಕ್ಕೆ ನನ್ನನ್ನು ಏನೂ ಕೇಳಬೇಡಿ, ಲೋಕಾಯಕ್ತರ ವಿಚಾರಣೆ ಮುಗಿದ ಬಳಿಕ ಮಾತಾಡುತ್ತೇನೆ ಅನ್ನುತ್ತಾರೆ. ಅವರು ಮಾನಸಿಕ ಒತ್ತಡದಲ್ಲಿರುವುದು ಸತ್ಯ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ