Vinay Rajkumar: ವಿನಯ್​ ರಾಜ್​ಕುಮಾರ್​ ಹೊಸ ಸಿನಿಮಾ ಅನೌನ್ಸ್​; ದೊಡ್ಮನೆ ನಟನ ಜತೆ ಕೈ ಜೋಡಿಸಿದ ಸಿಂಪಲ್​ ಸುನಿ

Simple Suni | Vinay Rajkumar: ವಿನಯ್​ ರಾಜ್​ಕುಮಾರ್​ ಮತ್ತು ಸಿಂಪಲ್​ ಸುನಿ ಅವರ ಹೊಸ ಚಿತ್ರಕ್ಕೆ ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಚಿತ್ರದ ಶೀರ್ಷಿಕೆ ಏನೆಂಬುದು ಗೊತ್ತಾಗಲಿದೆ.

Vinay Rajkumar: ವಿನಯ್​ ರಾಜ್​ಕುಮಾರ್​ ಹೊಸ ಸಿನಿಮಾ ಅನೌನ್ಸ್​; ದೊಡ್ಮನೆ ನಟನ ಜತೆ ಕೈ ಜೋಡಿಸಿದ ಸಿಂಪಲ್​ ಸುನಿ
ಸಿಂಪಲ್​ ಸುನಿ, ವಿನಯ್​ ರಾಜ್​ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Jan 05, 2023 | 8:20 PM

ಡಾ. ರಾಜ್​ಕುಮಾರ್​ ಮೊಮ್ಮಗ ವಿನಯ್​ ರಾಜ್​ಕುಮಾರ್​ (Vinay Rajkumar) ಅವರು ಚಿತ್ರರಂಗಕ್ಕೆ ಕಾಲಿಟ್ಟು ಕೆಲವು ವರ್ಷಗಳು ಕಳೆದಿವೆ. ಮೊದಲ ಸಿನಿಮಾ ‘ಸಿದ್ದಾರ್ಥ’ ಇಂದ ಇಲ್ಲಿಯ ತನಕ ಅವರು ಬಣ್ಣ ಹಚ್ಚಿದ್ದು ಕೆಲವೇ ಪ್ರಾಜೆಕ್ಟ್​ಗಳಲ್ಲಿ ಮಾತ್ರ. ಸಿನಿಮಾಗಳ ಆಯ್ಕೆಯಲ್ಲಿ ಅವರು ಚ್ಯೂಸಿ ಆಗಿದ್ದಾರೆ. ಪ್ರತಿ ಬಾರಿಯೂ ಅವರು ಭಿನ್ನ ಪ್ರಯತ್ನಗಳನ್ನು ಮಾಡುತ್ತಾರೆ. ಡಾ. ರಾಜ್​ಕುಮಾರ್​ ಕುಟುಂಬದ (Dr Rajkumar Family) ನಟರ ಸಿನಿಮಾ ಎಂದರೆ ಅಭಿಮಾನಿಗಳಿಗೆ ವಿಶೇಷ ನಿರೀಕ್ಷೆ ಇದ್ದೇ ಇರುತ್ತದೆ. ಈಗ ವಿನಯ್​ ರಾಜ್​ಕುಮಾರ್​ ಅವರ ಹೊಸ ಸಿನಿಮಾ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಸಿಂಪಲ್​ ಸುನಿ (Simple Suni) ಅವರು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ ಎಂಬುದು ವಿಶೇಷ.

ಮೊದಲ ಬಾರಿ ಸುನಿ-ವಿನಯ್​ ಕಾಂಬಿನೇಷನ್​:

‘ಸಿಂಪಲ್’ ಸುನಿ ಅವರ ಮುಂದಿನ ಚಿತ್ರ ರೊಮ್ಯಾಂಟಿಕ್ ಕಥಾಹಂದರವನ್ನು ಒಳಗೊಂಡಿದ್ದು, ಈ ಚಿತ್ರದಲ್ಲಿ ಹೀರೋ ಆಗಿ ವಿನಯ್ ರಾಜ್​ಕುಮಾರ್ ಬಣ್ಣ ಹಚ್ಚಲಿದ್ದಾರೆ. ಇದೇ ಮೊದಲ ಬಾರಿಗೆ ‘ಸಿಂಪಲ್’ ಸುನಿ ಹಾಗೂ ವಿನಯ್ ರಾಜ್​ಕುಮಾರ್ ಜೊತೆಯಾಗಿ ಕೆಲಸ ಮಾಡುತ್ತಿದ್ದು, ಇಬ್ಬರ ಕಾಂಬಿನೇಷನ್ ಮೇಲೆ ಸಹಜವಾಗಿಯೇ ನಿರೀಕ್ಷೆ ಮೂಡಿದೆ. ಚಿತ್ರಕ್ಕೆ ಪ್ರಸನ್ನ ಕಥೆ ಬರೆದಿದ್ದು, ಸುನಿ ಅವರು ನಿರ್ದೇಶನ ಮಾಡುವುದರ ಜೊತೆಗೆ ಚಿತ್ರಕಥೆ ಮತ್ತು ಸಂಭಾಷಣೆಯ ಜಬಾವ್ದಾರಿಯನ್ನೂ ನಿಭಾಯಿಸಲಿದ್ದಾರೆ.

ಇದನ್ನೂ ಓದಿ: Avatara Purusha Review: ಅವತಾರ ಪುರುಷನ ಹಲವು ಅವತಾರ, ನಿಜವಾದದ್ದು ಯಾವುದು?

ಇದನ್ನೂ ಓದಿ
Image
ಈ ಬಾರಿಯ ಲಾಲ್​ಬಾಗ್ ಫ್ಲಾವರ್ ಶೋ ಮೂಲಕ ಡಾ ರಾಜ್ ಮತ್ತು ಪುನೀತ್ ರಾಜಕುಮಾರರಿಗೆ ಶ್ರದ್ಧಾಂಜಲಿ!
Image
Dr Rajkumar: ಡಾ. ರಾಜ್​ಕುಮಾರ್​​ ನಟನೆಯ ‘ಭಾಗ್ಯವಂತರು’ ಚಿತ್ರ ಜುಲೈ 8ಕ್ಕೆ ಮತ್ತೆ ರಿಲೀಸ್​; ಈ ಬಾರಿ ವಿಶೇಷ ಏನು?
Image
ತುಂಬಾ ಪುಣ್ಯ ಮಾಡಿದ್ರೇನೇ ಅಣ್ಣಾವ್ರ ಜತೆ ನಟಿಸೋಕೆ ಆಗೋದು; ನಟಿ ಲಕ್ಷ್ಮೀ
Image
‘ಬಂಗಾರದ ಮನುಷ್ಯ’ ಚಿತ್ರಕ್ಕೆ 50 ವರ್ಷ; ಅಣ್ಣಾವ್ರು ನಟಿಸಿದ ಈ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ

ಯಾವ ಹಂತದಲ್ಲಿದೆ ಸಿನಿಮಾ ಕೆಲಸ?

ವಿನಯ್​ ರಾಜ್​ಕುಮಾರ್​ ಮತ್ತು ಸಿಂಪಲ್​ ಸುನಿ ಅವರ ಹೊಸ ಚಿತ್ರಕ್ಕೆ ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸುನಿ ಅವರು ಶೀಘ್ರದಲ್ಲೇ ಚಿತ್ರದ ಶೀರ್ಷಿಕೆ ಹಾಗೂ ಇನ್ನುಳಿದ ಪಾತ್ರವರ್ಗದ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ವಿನಯ್ ರಾಜ್​ಕುಮಾರ್ ಅಭಿನಯದ ‘ಪೆಪೆ’, ‘ಗ್ರಾಮಾಯಣ’, ‘ಅದೊಂದಿತ್ತು ಕಾಲ’ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅವುಗಳ ಸಾಲಿಗೆ ಈ ಹೊಸ ಚಿತ್ರ ಸೇರ್ಪಡೆ ಆಗುತ್ತಿದೆ. 2023ರಲ್ಲಿ ಅವರ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​ ಆಗಲಿವೆ.

ಇದನ್ನೂ ಓದಿ: Sakath Movie Review: ‘ಸಖತ್’​ ಮನರಂಜನೆ, ‘ಸಖತ್’​ ಸಂದೇಶ; ಇದು ಗಣೇಶ್​-ಸುನಿ ಪಂಚ್​

ಈ ಚಿತ್ರಕ್ಕೆ ಮೈಸೂರು ರಮೇಶ್ ಬಂಡವಾಳ ಹೂಡುತ್ತಿದ್ದಾರೆ. ವೀರ್ ಸಮರ್ಥ್ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಭಾ ಛಾಯಾಗ್ರಾಹಣ ಮಾಡಲಿದ್ದಾರೆ. ಸಿಂಪಲ್​ ಸುನಿ ನಿರ್ದೇಶನದ ಸಿನಿಮಾ ಎಂದರೆ ಏನಾದರೊಂದು ವಿಶೇಷ ಇದ್ದೇ ಇರುತ್ತದೆ. ಪ್ರತಿ ಬಾರಿ ಅವರು ಹೊಸ ಸಿನಿಮಾ ಅನೌನ್ಸ್​ ಆದಾಗಲೂ ಫ್ಯಾನ್ಸ್​ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಈ ಬಾರಿ ಅವರು ಯಾವ ರೀತಿಯ ಕಥೆಯನ್ನು ತೆರೆಗೆ ತರಲಿದ್ದಾರೆ ಎಂಬುದನ್ನು ಕಾದು ನೀಡಬೇಕು. ಅವರ ‘ಗತ ವೈಭವ’ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ