Dr Rajkumar: ಡಾ. ರಾಜ್​ಕುಮಾರ್​​ ನಟನೆಯ ‘ಭಾಗ್ಯವಂತರು’ ಚಿತ್ರ ಜುಲೈ 8ಕ್ಕೆ ಮತ್ತೆ ರಿಲೀಸ್​; ಈ ಬಾರಿ ವಿಶೇಷ ಏನು?

Bhagyavantharu Kannada Movie: ಸೂಪರ್ ಹಿಟ್​ ‘ಭಾಗ್ಯವಂತರು’ ಚಿತ್ರ ಮರು ಬಿಡುಗಡೆ ಆಗುತ್ತಿದೆ. ಜುಲೈ 8ರಂದು ದೊಡ್ಡ ಪರದೆಯಲ್ಲಿ ಮತ್ತೆ ಅಣ್ಣಾವ್ರನ್ನು ನೋಡಿ ಎಂಜಾಯ್​ ಮಾಡಲು ಅಭಿಮಾನಿಗಳು ಕಾದಿದ್ದಾರೆ.

Dr Rajkumar: ಡಾ. ರಾಜ್​ಕುಮಾರ್​​ ನಟನೆಯ ‘ಭಾಗ್ಯವಂತರು’ ಚಿತ್ರ ಜುಲೈ 8ಕ್ಕೆ ಮತ್ತೆ ರಿಲೀಸ್​; ಈ ಬಾರಿ ವಿಶೇಷ ಏನು?
‘ಭಾಗ್ಯವಂತರು’ ಸಿನಿಮಾ ಪೋಸ್ಟರ್​
Follow us
TV9 Web
| Updated By: ಮದನ್​ ಕುಮಾರ್​

Updated on:Jun 27, 2022 | 9:58 AM

ಮೇರುನಟ ಡಾ. ರಾಜ್​ಕುಮಾರ್​ (Dr Rajkumar) ಮೇಲೆ ಜನರು ಇಟ್ಟಿರುವ ಅಭಿಮಾನ ಎಂದಿಗೂ ಕಡಿಮೆ ಆಗುವಂಥದ್ದಲ್ಲ. ಅವರು ನಟಿಸಿದ ಅನೇಕ ಸಿನಿಮಾಗಳು ಈಗಾಗಲೇ ಮರುಬಿಡುಗಡೆ ಆಗಿ ದಾಖಲೆ ಮಾಡಿವೆ. ಈಗ ಮತ್ತೊಮ್ಮೆ ‘ಭಾಗ್ಯವಂತರು’ ಸಿನಿಮಾ ರಿಲೀಸ್​ ಆಗಲಿದೆ. ದ್ವಾರಕೀಶ್​ ನಿರ್ಮಾಣ ಮಾಡಿದ್ದ ಈ ಸಿನಿಮಾದಲ್ಲಿ ಡಾ. ರಾಜ್​ಕುಮಾರ್​ ಮತ್ತು ಬಿ. ಸರೋಜಾದೇವಿ (B Sarojadevi) ಅವರು ಜೋಡಿಯಾಗಿ ನಟಿಸಿದ್ದರು. ಅಭಿಮಾನಿಗಳ ಫೇವರಿಟ್​ ಸಿನಿಮಾಗಳ ಪಟ್ಟಿಯಲ್ಲಿ ‘ಭಾಗ್ಯವಂತರು’ (Bhagyavantharu) ಚಿತ್ರ ಇಂದಿಗೂ ಸ್ಥಾನ ಪಡೆದುಕೊಂಡಿದೆ. ಈ ಚಿತ್ರಕ್ಕೆ ಹೊಸ ತಂತ್ರಜ್ಞಾನ ಅಳವಡಿಸಲಾಗಿದ್ದು, ಮುನಿರಾಜು ಎಂ. ಅವರು ಮರು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಜುಲೈ 8ರಂದು ಈ ಚಿತ್ರ ರಿ-ರಿಲೀಸ್​ ಆಗಲಿದೆ. ಇದು ಡಾ. ರಾಜ್​ಕುಮಾರ್​ ಅಭಿಮಾನಿಗಳಿಗೆ ಖುಷಿ ನೀಡಿದೆ. ದೊಡ್ಡ ಪರದೆಯಲ್ಲಿ ಮತ್ತೆ ಅಣ್ಣಾವ್ರನ್ನು ನೋಡಿ ಎಂಜಾಯ್​ ಮಾಡಲು ಫ್ಯಾನ್ಸ್​ ಸಜ್ಜಾಗಿದ್ದಾರೆ.

‘ಭಾಗ್ಯವಂತರು’ ಸಿನಿಮಾ ತೆರೆಕಂಡಿದ್ದು 1974ರಲ್ಲಿ. ಈಗ ಬರೋಬ್ಬರಿ 48 ವರ್ಷಗಳ ಬಳಿಕ ಈ ಸಿನಿಮಾ ಮತ್ತೆ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಈ ಬಾರಿ ಒಂದಷ್ಟು ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. 7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ ಆಧುನಿಕ ಸೌಲಭ್ಯಗಳೊಂದಿಗೆ ಈ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜುಲೈ 8ರಂದು ರಾಜ್ಯಾದ್ಯಂತ 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಭಾಗ್ಯವಂತರು’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಮುನಿರಾಜು ತಿಳಿಸಿದ್ದಾರೆ.

ಮುನಿರಾಜು ಅವರು ಡಾ. ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಅಣ್ಣಾವ್ರ ಸಿನಿಮಾಗಳು ಎಂದರೆ ಅವರಿಗೆ ಸಖತ್​ ಇಷ್ಟ. ಈ ಹಿಂದೆ ‘ಆಪರೇಷನ್ ಡೈಮೆಂಡ್ ರಾಕೇಟ್’, ‘ನಾನೊಬ್ಬ ಕಳ್ಳ’, ‘ದಾರಿ ತಪ್ಪಿದ ಮಗ’ ಸೇರಿದಂತೆ ಕೆಲವು ಸಿನಿಮಾಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಅವರು ಬಿಡುಗಡೆ ಮಾಡಿದ್ದರು. ಈಗ ‘ಭಾಗ್ಯವಂತರು’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ‘ಹುಲಿ ಹಾಲಿನ ಮೇವು’ ಸೇರಿದಂತೆ ಡಾ. ರಾಜ್​ಕುಮಾರ್​ ನಟನೆಯ ಇನ್ನಷ್ಟು ಐಕಾನಿಕ್​ ಸಿನಿಮಾಗಳನ್ನು ಹೊಸ ತಂತ್ರಜ್ಞಾನದೊಂದಿಗೆ ರೀ-ರಿಲೀಸ್​ ಮಾಡಬೇಕು ಎಂಬ ಆಲೋಚನೆ ಅವರಿಗಿದೆ.

ಇದನ್ನೂ ಓದಿ
Image
ಡಾ. ರಾಜ್​ ಭೇಟಿ ಮಾಡಿದ್ದ ದ್ರಾವಿಡ್​, ಶ್ರೀನಾಥ್​, ಕುಂಬ್ಳೆ; ಅಪರೂಪದ ಮಾಹಿತಿ ತೆರೆದಿಟ್ಟ ರಾಘಣ್ಣ
Image
Dr Rajkumar Birth Anniversary: ಡಾ.ರಾಜ್​ಕುಮಾರ್ ಅಪರೂಪದ ಫೋಟೋಗಳು ಹಾಗೂ ಮೇರುನಟನ ಕುರಿತ ವಿಶೇಷ ಸಂಗತಿಗಳು ಇಲ್ಲಿವೆ
Image
Dr Rajkumar: ‘ನಿನದೇ ನೆನಪು ದಿನವೂ ಮನದಲ್ಲಿ..’: ಡಾ. ರಾಜ್​ ಜನ್ಮದಿನಕ್ಕೆ ಪುನೀತ್​ ವಿಶ್​ ಮಾಡಿದ್ದ ವಿಡಿಯೋ ವೈರಲ್​
Image
ರಾಜ್​ಕುಮಾರ್​ ಗೌರವ ಡಾಕ್ಟರೇಟ್​ ಪಡೆದು 46 ವರ್ಷ ಪೂರ್ಣ; ಕೋಟ್ಯಂತರ ಜನರಿಗೆ ವರನಟ ಸ್ಫೂರ್ತಿ

ಇದನ್ನೂ ಓದಿ: ‘ಬೈರಾಗಿ’ ಯಾತ್ರೆ: ಡಾ. ರಾಜ್​ ಹುಟ್ಟಿ ಬೆಳೆದ ಗಾಜನೂರು ನೋಡಲು ಶಿವಣ್ಣನ ಜತೆ ಹೊರಟ ಡಾಲಿ ಧನಂಜಯ

‘ಡಾ. ರಾಜ್​ಕುಮಾರ್​ ಬಗ್ಗೆ ಅವರ ತಂದೆ ನುಡಿದಿದ್ರು ಭವಿಷ್ಯ’: ಅಚ್ಚರಿಯ ಘಟನೆ ಮೆಲುಕು ಹಾಕಿದ ರಾಘಣ್ಣ

Published On - 9:57 am, Mon, 27 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ