Gym Ravi: 50 ದಿನ ಪೂರೈಸಿದ ‘ಪುರುಷೋತ್ತಮ’ ಸಿನಿಮಾ; ಹೀರೋ ಆಗಿ ಗೆಲುವು ಕಂಡ ಜಿಮ್​ ರವಿ

Purushothama Kannada Movie: ಜಿಮ್​ ರವಿ ನಟನೆಯ ‘ಪುರುಷೋತ್ತಮ’ ಸಿನಿಮಾ ಹಾಫ್​ ಸೆಂಚುರಿ ಬಾರಿಸಿದೆ. ಅಂದರೆ, 50 ದಿನ ಪ್ರದರ್ಶನ ಕಂಡಿದೆ. ಈ ಖುಷಿಯನ್ನು ಚಿತ್ರತಂಡ ಸಂಭ್ರಮಿಸಿದೆ.

Jun 27, 2022 | 8:06 AM
TV9kannada Web Team

| Edited By: Madan Kumar

Jun 27, 2022 | 8:06 AM

ಬಾಡಿ ಬಿಲ್ಡರ್​ ಆಗಿ ಜನಪ್ರಿಯತೆ ಪಡೆದ ಜಿಮ್​ ರವಿ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪುರುಷೋತ್ತಮ’ ಚಿತ್ರದ ಮೂಲಕ ಅವರು ಹೀರೋ ಆದರು. ನಾಯಕ ನಟನಾಗಿ ಮೊದಲ ಪ್ರಯತ್ನದಲ್ಲೇ ಅವರು ಗೆಲುವು ಕಂಡಿದ್ದಾರೆ. ಈ ಯಶಸ್ಸಿಗಾಗಿ ಆಪ್ತರು ಮತ್ತು ಅಭಿಮಾನಿಗಳು ಜಿಮ್ ರವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

1 / 5
‘ಪುರುಷೋತ್ತಮ’ ಸಿನಿಮಾ 50ನೇ ದಿನಗಳನ್ನು ಪೂರೈಸಿದೆ. ಕೌಟುಂಬಿಕ ಕಥಾಹಂದರ ಇರುವ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಗೆಲುವನ್ನು ಇಡೀ ತಂಡದ ಜೊತೆ ಸೇರಿ ಜಿಮ್​ ರವಿ ಸಂಭ್ರಮಿಸಿದ್ದಾರೆ. ಚಿತ್ರದ ಯಶಸ್ಸಿಗೆ ಕಾರಣವಾದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

2 / 5
‘ಪುರುಷೋತ್ತಮ’ ಸಿನಿಮಾದಲ್ಲಿ ಜಿಮ್​ ರವಿ ಮತ್ತು ನಟಿ ಅಪೂರ್ವಾ ಅವರು ಜೋಡಿಯಾಗಿ ನಟಿಸಿದ್ದಾರೆ. ಪತಿ-ಪತ್ನಿಗೆ ಒಂದೊಳ್ಳೆಯ ಮೆಸೇಜ್​ ನೀಡುವಂತಹ ಸಿನಿಮಾದಲ್ಲಿ ನಟಿಸಿದ್ದಕ್ಕೆ ಅಪೂರ್ವಾ ಅವರಿಗೆ ಖುಷಿ ಇದೆ. ಚಿತ್ರದ ಗೆಲುವಿನಲ್ಲಿ ಅವರು ಕೂಡ ಸಂಭ್ರಮಿಸಿದ್ದಾರೆ.

3 / 5
‘ಪುರುಷೋತ್ತಮ’ ಸಿನಿಮಾ 50 ದಿನ ಪೂರೈಸಿದ್ದಕ್ಕಾಗಿ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ. ಹರೀಶ್​ ಅವರು ಅತಿಥಿಯಾಗಿ ಆಗಮಿಸಿದ್ದರು. ಜೈ ಜಗದೀಶ್​ ಅವರು ಕೂಡ ಬಂದು ಅಭಿನಂದನೆ ತಿಳಿಸಿದರು.

4 / 5
ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಪಕನಾಗಿಯೂ ಜಿಮ್​ ರವಿ ಅವರು ಗೆಲುವು ಕಂಡಿದ್ದಾರೆ. ಸಿನಿಮಾಗಾಗಿ ಶ್ರಮಿಸಿದ ಎಲ್ಲರನ್ನೂ ವೇದಿಕೆಗೆ ಕರೆದು ಅವರು ಸ್ಮರಣಿಕೆ ನೀಡಿದರು. ಸಿನಿಮಾ ನೋಡಿದ ಕೆಲವು ಪ್ರೇಕ್ಷಕರು ವೇದಿಕೆಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡರು.

5 / 5

Follow us on

Most Read Stories

Click on your DTH Provider to Add TV9 Kannada