Kannada News » Photo gallery » Dr Rajkumar Birth Anniversary Rajkumar rare photos with family and Puneeth and unknown facts about Bangarada Manushya actor
Dr Rajkumar Birth Anniversary: ಡಾ.ರಾಜ್ಕುಮಾರ್ ಅಪರೂಪದ ಫೋಟೋಗಳು ಹಾಗೂ ಮೇರುನಟನ ಕುರಿತ ವಿಶೇಷ ಸಂಗತಿಗಳು ಇಲ್ಲಿವೆ
Dr Rajkumar Birthday | Dr Rajkumar Rare Photos: ಕನ್ನಡ ಚಿತ್ರರಂಗದ ಮೇರುನಟ, ನಟಸಾರ್ವಭೌಮ ಡಾ.ರಾಜ್ಕುಮಾರ್ ಜನ್ಮದಿನ ಇಂದು (ಏ.24). ನಾಯಕ ನಟರಾಗಿ ಗುರುತಿಸಿಕೊಂಡು ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಡಾ.ರಾಜ್ಕುಮಾರ್. ವೃತ್ತಿ ಜೀವನದಲ್ಲಿ 205ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು, ಅಭಿಮಾನಿಗಳ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ. ಡಾ.ರಾಜ್ ಅವರ ಅಪರೂಪದ ಫೋಟೋಗಳು ಇಲ್ಲಿವೆ.
ಕನ್ನಡದ ಮೇರುನಟ ಡಾ.ರಾಜ್ಕುಮಾರ್ ಅವರ ಜನ್ಮದಿನವಿಂದು. 1929ರ ಏಪ್ರಿಲ್ 24ರಂದು ಜನಿಸಿದ ಡಾ.ರಾಜ್ ಮೂಲ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ನಾಯಕರಾಗಿ ಕಾಣಿಸಿಕೊಂಡ ಅವರಿಗೆ ರಾಜ್ಕುಮಾರ್ ಎಂದು ಹೆಸರನ್ನು ಇಟ್ಟವರು ನಿರ್ದೇಶಕ ಹೆಚ್.ಎಲ್.ಎನ್.ಸಿಂಹ. (Credits: Raghavendra Rajkumar/ Twitter)
1 / 7
ಡಾ.ರಾಜ್ ತಮ್ಮ 5 ದಶಕಕ್ಕೂ ಹೆಚ್ಚಿನ ವೃತ್ತಿ ಬದುಕಿನಲ್ಲಿ 206ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. (Credits: Raghavendra Rajkumar/ Twitter)
2 / 7
ನಾಯಕ ನಟರಾಗಿ ಗುರುತಿಸಿಕೊಂಡು ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಕಲಾವಿದ ಡಾ.ರಾಜ್ಕುಮಾರ್. ಅವರಿಗೆ ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ, ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. (Credits: Raghavendra Rajkumar/ Twitter)
3 / 7
ಡಾ.ರಾಜ್ ನಟಿಸಿರುವ 34 ಚಿತ್ರಗಳು 9 ಭಾಷೆಗಳಲ್ಲಿ ಒಟ್ಟಾರೆ 58 ಬಾರಿ ರಿಮೇಕ್ ಆಗಿವೆ. ಒಟ್ಟು 34 ನಾಯಕ ನಟರು ರಾಜ್ ನಿರ್ವಹಿಸಿದ್ದ ಪಾತ್ರಗಳನ್ನು ವಿವಿಧ ಭಾಷೆಗಳಲ್ಲಿ ನಿರ್ವಹಿಸಿದ್ದಾರೆ. ಮೊದಲ ಬಾರಿಗೆ ಒಬ್ಬ ನಟನ ಚಿತ್ರಗಳು 50ಕ್ಕೂ ಹೆಚ್ಚು ಬಾರಿ ರಿಮೇಕ್ ಆಗಿರುವುದು ಹಾಗೂ 9 ಭಾಷೆಗಳಲ್ಲಿ ರಿಮೇಕ್ ಆಗಿ ತೆರೆಕಂಡಿರುವುದು ಡಾ.ರಾಜ್ ಹೆಗ್ಗಳಿಕೆ. (ಚಿತ್ರ: ಪರಶುರಾಮ್ ಚಿತ್ರದ ದಂದರ್ಭದಲ್ಲಿ ಡಾ.ರಾಜ್ ಹಾಗೂ ಪುನೀತ್ - Credits: Raghavendra Rajkumar/ Twitter)
4 / 7
ಭಾರತೀಯ ಚಿತ್ರರಂಗದಲ್ಲಿನ ಇದುವರೆಗಿನ ಇತಿಹಾಸದಲ್ಲಿ ಅತ್ಯುದ್ಭುತ ನಟನೆಯ 25 ಸಿನಿಮಾಗಳನ್ನು ಫೋರ್ಬ್ಸ್ ಪಟ್ಟಿಮಾಡಿತ್ತು. ಅದರಲ್ಲಿ ಡಾ.ರಾಜ್ ನಟನೆಯ ‘ಬಂಗಾರದ ಮನುಷ್ಯ’ವೂ ಸ್ಥಾನ ಪಡೆದಿತ್ತು. (ಚಿತ್ರದಲ್ಲಿ ಡಾ.ರಾಜ್ ಹಾಗೂ ಪುನೀತ್- Credits: Raghavendra Rajkumar/ Twitter)
5 / 7
ಎಲ್ಲಾ ಪ್ರಶಸ್ತಿ ಸನ್ಮಾನಗಳಿಗಿಂತ ಹೆಚ್ಚಾಗಿ ಡಾ.ರಾಜ್ ಅಭಿಮಾನಿಗಳ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ. ‘ಅಭಿಮಾನಿಗಳೇ ದೇವರು’ ಎಂದ ಡಾ.ರಾಜ್, ನಿರ್ಮಿಸಿಕೊಟ್ಟ ಮೇಲ್ಪಂಕ್ತಿಯಲ್ಲೇ ಇಂದಿನ ಕನ್ನಡ ಚಿತ್ರರಂಗವೂ ಸಾಗುತ್ತಿದೆ. (Credits: Raghavendra Rajkumar/ Twitter)
6 / 7
ಡಾ.ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಕುಟುಂಬ (Credits: Raghavendra Rajkumar/ Twitter)