Dr Rajkumar Birth Anniversary: ಡಾ.ರಾಜ್​ಕುಮಾರ್ ಅಪರೂಪದ ಫೋಟೋಗಳು ಹಾಗೂ ಮೇರುನಟನ ಕುರಿತ ವಿಶೇಷ ಸಂಗತಿಗಳು ಇಲ್ಲಿವೆ

Dr Rajkumar Birthday | Dr Rajkumar Rare Photos: ಕನ್ನಡ ಚಿತ್ರರಂಗದ ಮೇರುನಟ, ನಟಸಾರ್ವಭೌಮ ಡಾ.ರಾಜ್​ಕುಮಾರ್ ಜನ್ಮದಿನ ಇಂದು (ಏ.24). ನಾಯಕ ನಟರಾಗಿ ಗುರುತಿಸಿಕೊಂಡು ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಡಾ.ರಾಜ್​ಕುಮಾರ್. ವೃತ್ತಿ ಜೀವನದಲ್ಲಿ 205ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು, ಅಭಿಮಾನಿಗಳ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ. ಡಾ.ರಾಜ್​ ಅವರ ಅಪರೂಪದ ಫೋಟೋಗಳು ಇಲ್ಲಿವೆ.

TV9 Web
| Updated By: shivaprasad.hs

Updated on:Apr 24, 2022 | 8:32 AM

ಕನ್ನಡದ ಮೇರುನಟ ಡಾ.ರಾಜ್​ಕುಮಾರ್ ಅವರ ಜನ್ಮದಿನವಿಂದು. 1929ರ ಏಪ್ರಿಲ್ 24ರಂದು ಜನಿಸಿದ ಡಾ.ರಾಜ್​ ಮೂಲ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ನಾಯಕರಾಗಿ ಕಾಣಿಸಿಕೊಂಡ ಅವರಿಗೆ ರಾಜ್​ಕುಮಾರ್ ಎಂದು ಹೆಸರನ್ನು ಇಟ್ಟವರು ನಿರ್ದೇಶಕ ಹೆಚ್.ಎಲ್​.ಎನ್​.ಸಿಂಹ. (Credits: Raghavendra Rajkumar/ Twitter)

1 / 7
ಡಾ.ರಾಜ್ ತಮ್ಮ 5 ದಶಕಕ್ಕೂ ಹೆಚ್ಚಿನ ವೃತ್ತಿ ಬದುಕಿನಲ್ಲಿ 206ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. (Credits: Raghavendra Rajkumar/ Twitter)

2 / 7
ನಾಯಕ ನಟರಾಗಿ ಗುರುತಿಸಿಕೊಂಡು ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಕಲಾವಿದ ಡಾ.ರಾಜ್​ಕುಮಾರ್. ಅವರಿಗೆ ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ, ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. (Credits: Raghavendra Rajkumar/ Twitter)

3 / 7
ಡಾ.ರಾಜ್ ನಟಿಸಿರುವ 34 ಚಿತ್ರಗಳು 9 ಭಾಷೆಗಳಲ್ಲಿ ಒಟ್ಟಾರೆ 58 ಬಾರಿ ರಿಮೇಕ್ ಆಗಿವೆ. ಒಟ್ಟು 34 ನಾಯಕ ನಟರು ರಾಜ್ ನಿರ್ವಹಿಸಿದ್ದ ಪಾತ್ರಗಳನ್ನು ವಿವಿಧ ಭಾಷೆಗಳಲ್ಲಿ ನಿರ್ವಹಿಸಿದ್ದಾರೆ. ಮೊದಲ ಬಾರಿಗೆ ಒಬ್ಬ ನಟನ ಚಿತ್ರಗಳು 50ಕ್ಕೂ ಹೆಚ್ಚು ಬಾರಿ ರಿಮೇಕ್ ಆಗಿರುವುದು ಹಾಗೂ 9 ಭಾಷೆಗಳಲ್ಲಿ ರಿಮೇಕ್ ಆಗಿ ತೆರೆಕಂಡಿರುವುದು ಡಾ.ರಾಜ್​ ಹೆಗ್ಗಳಿಕೆ. (ಚಿತ್ರ: ಪರಶುರಾಮ್ ಚಿತ್ರದ ದಂದರ್ಭದಲ್ಲಿ ಡಾ.ರಾಜ್ ಹಾಗೂ ಪುನೀತ್ - Credits: Raghavendra Rajkumar/ Twitter)

4 / 7
ಭಾರತೀಯ ಚಿತ್ರರಂಗದಲ್ಲಿನ ಇದುವರೆಗಿನ ಇತಿಹಾಸದಲ್ಲಿ ಅತ್ಯುದ್ಭುತ ನಟನೆಯ 25 ಸಿನಿಮಾಗಳನ್ನು ಫೋರ್ಬ್ಸ್ ಪಟ್ಟಿಮಾಡಿತ್ತು. ಅದರಲ್ಲಿ ಡಾ.ರಾಜ್ ನಟನೆಯ ‘ಬಂಗಾರದ ಮನುಷ್ಯ’ವೂ ಸ್ಥಾನ ಪಡೆದಿತ್ತು. (ಚಿತ್ರದಲ್ಲಿ ಡಾ.ರಾಜ್ ಹಾಗೂ ಪುನೀತ್- Credits: Raghavendra Rajkumar/ Twitter)

5 / 7
ಎಲ್ಲಾ ಪ್ರಶಸ್ತಿ ಸನ್ಮಾನಗಳಿಗಿಂತ ಹೆಚ್ಚಾಗಿ ಡಾ.ರಾಜ್ ಅಭಿಮಾನಿಗಳ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ. ‘ಅಭಿಮಾನಿಗಳೇ ದೇವರು’ ಎಂದ ಡಾ.ರಾಜ್, ನಿರ್ಮಿಸಿಕೊಟ್ಟ ಮೇಲ್ಪಂಕ್ತಿಯಲ್ಲೇ ಇಂದಿನ​ ಕನ್ನಡ ಚಿತ್ರರಂಗವೂ ಸಾಗುತ್ತಿದೆ. (Credits: Raghavendra Rajkumar/ Twitter)

6 / 7
ಡಾ.ರಾಜ್​ಕುಮಾರ್ ಹಾಗೂ ಪಾರ್ವತಮ್ಮ ರಾಜ್​ಕುಮಾರ್ ಕುಟುಂಬ (Credits: Raghavendra Rajkumar/ Twitter)

7 / 7

Published On - 8:30 am, Sun, 24 April 22

Follow us