75ನೇ ಹುಟ್ಟುಹಬ್ಬ: ಆಗಸದಲ್ಲಿ ಪ್ರಧಾನಿ ಮೋದಿ ಚಿತ್ತಾರ‌ ಬಿಡಿಸಿದ ಡ್ರೋನ್‌ಗಳು

Edited By:

Updated on: Sep 17, 2025 | 11:11 PM

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ದೇಶ, ವಿದೇಶದಿಂದ ವಿವಿಧ ರೀತಿಯಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಇನ್ನು ಬೆಂಗಳೂರಿನಲ್ಲಿ ಡ್ರೋನ್‌ಗಳ ಮೂಲಕ ಪ್ರಧಾನಿ ಮೋದಿಗೆ ವಿಶಿಷ್ಟವಾಗಿ ಜನ್ಮದಿನದ ಶುಭಾಶಯ ಕೋರಲಾಗಿದೆ. ಹಲಸೂರಿನ ಆರ್‌ಬಿಎನ್‌ಎಂಎಸ್‌ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 1000 ಡ್ರೋನ್‌ಗಳು 200 ಅಡಿ ಮೇಲೆ ಪ್ರದರ್ಶನ ಮಾಡಿದ್ದು, ಈ ವೇಳೆ ಆಗಸದಲ್ಲಿ ಪ್ರಧಾನಿ ಮೋದಿ ಚಿತ್ತಾರ‌ ಬಿಡಿಸಿ ಶುಭಾಶಯ ತಿಳಿಸಲಾಯ್ತು.

ಬೆಂಗಳೂರು, (ಸೆಪ್ಟೆಂಬರ್ 17): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ದೇಶ, ವಿದೇಶದಿಂದ ವಿವಿಧ ರೀತಿಯಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಇನ್ನು ಬೆಂಗಳೂರಿನಲ್ಲಿ ಡ್ರೋನ್‌ಗಳ ಮೂಲಕ ಪ್ರಧಾನಿ ಮೋದಿಗೆ ವಿಶಿಷ್ಟವಾಗಿ ಜನ್ಮದಿನದ ಶುಭಾಶಯ ಕೋರಲಾಗಿದೆ. ಹಲಸೂರಿನ ಆರ್‌ಬಿಎನ್‌ಎಂಎಸ್‌ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 1000 ಡ್ರೋನ್‌ಗಳು 200 ಅಡಿ ಮೇಲೆ ಪ್ರದರ್ಶನ ಮಾಡಿದ್ದು, ಈ ವೇಳೆ ಆಗಸದಲ್ಲಿ ಪ್ರಧಾನಿ ಮೋದಿ ಚಿತ್ತಾರ‌ ಬಿಡಿಸಿ ಶುಭಾಶಯ ತಿಳಿಸಲಾಯ್ತು.