ಬಳ್ಳಾರಿ: ರೈತನ ಜಮೀನಿನಲ್ಲಿ ಸಿಕ್ತು ಹತ್ತು ಶತಮಾನ ಹಳೆಯ ಮೂರ್ತಿಗಳು!

Edited By:

Updated on: Nov 25, 2025 | 3:40 PM

ವಿಜಯನಗರ ತಿರುಗಾಟ ಸಂಶೋಧನ ತಂಡ ಸಿರಗುಪ್ಪ ತಾಲೂಕಿನ ಬಲ್ಕುಂದಿ ಗ್ರಾಮದಲ್ಲಿ ಅಪರೂಪದ ಮೂರ್ತಿಗಳನ್ನು ಪತ್ತೆ ಮಾಡಿದೆ. ಭಿನ್ನವಾಗಿರುವ ಸ್ಥಿತಿಯಲ್ಲಿ ಒಂದು ಮೂರ್ತಿ ಸಿಕ್ಕಿದ್ದು, ಚರಿತ್ರೆ ಕಟ್ಟಿಕೊಡುವ ಶಿಲ್ಪಗಳ ರಕ್ಷಣೆ ಮುಖ್ಯ. ಪರಂಪರೆಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇವುಗಳನ್ನ ಸಂರಕ್ಷಣೆ ಮಾಡಬೇಕು ಎಂದು ಸಂಶೋಧನಾ ತಂಡ ಅಭಿಪ್ರಾಯಪಟ್ಟಿದೆ.

ಬಳ್ಳಾರಿ, ನವೆಂಬರ್​ 25: ಜಿಲ್ಲೆಯ ಸಿರಗುಪ್ಪ ತಾಲೂಕಿನ ಬಲ್ಕುಂದಿ ಗ್ರಾಮದಲ್ಲಿ 11ನೇ ಶತಮಾನದ ಅಪರೂಪದ ಸೂರ್ಯ ಶಿಲ್ಪ ಸೇರಿ ಕೆಲ ಮೂರ್ತಿಗಳು ಪತ್ತೆಯಾಗಿವೆ. ವಿಜಯನಗರ ತಿರುಗಾಟ ಸಂಶೋಧನ ತಂಡ, ಮೌನೇಶ ಎಂಬುವವರ ಹೊಲದಲ್ಲಿ ಈ ಮೂರ್ತಿಗಳನ್ನ ಪತ್ತೆ ಮಾಡಿದೆ. ಸೂರ್ಯ ಶಿಲ್ಪವು 52 ಸೆಂ.ಮೀ. ಅಗಲ, 83 ಸೆಂ.ಮೀ. ಎತ್ತರವಿದೆ. ಶಿಲ್ಪದ ಪಾದಗಳ ಅಳತೆ 12 ಸೆಂ.ಮೀ .ಇದೆ. ಸೂರ್ಯದೇವನು ತನ್ನ ಎರಡು ಕೈಗಳಲ್ಲಿ ಕಮಲ ಹಿಡಿದಿದ್ದು, ಶಿಲ್ಪದ ಹಿಂದೆ ವೃತ್ತಾಕಾರದ ಪ್ರಭಾವಳಿ ಇದೆ. ಕಾಲುಗಳು ತುಂಡಾಗಿರುವ ಸ್ಥಿತಿಯಲ್ಲಿ ಮೂರ್ತಿ ಸಿಕ್ಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 25, 2025 03:18 PM