ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!

Updated on: Jan 26, 2026 | 6:08 PM

ಭಾರೀ ಹಿಮಪಾತದಿಂದಾಗಿ ಹಿಮಾಚಲ ಪ್ರದೇಶದ ಪ್ರಮುಖ ಪ್ರವಾಸಿ ತಾಣಗಳ ಕೆಲವು ಭಾಗಗಳು ನಿರ್ಬಂಧಿಸಲ್ಪಟ್ಟ ನಂತರ ಅನಿರೀಕ್ಷಿತ ಹವಾಮಾನವು ನೂರಾರು ಪ್ರವಾಸಿಗರ ಪ್ರಯಾಣ ಯೋಜನೆಗಳನ್ನು ಅಡ್ಡಿಪಡಿಸಿತು. ಇದರಿಂದಾಗಿ ಜನರು ರಸ್ತೆಗಳಲ್ಲಿ ಸಿಲುಕಿಕೊಂಡರು. ಶಿಮ್ಲಾ, ಮನಾಲಿ ಮತ್ತು ಕುಲ್ಲು ಮುಂತಾದ ಜನಪ್ರಿಯ ಪ್ರವಾಸಿ ತಾಣಗಳು ವಾಹನಗಳಿಂದ ತುಂಬಿ ತುಳುಕುತ್ತಿದ್ದವು. ಮನಾಲಿಯಲ್ಲಿ ರಸ್ತೆಗಳು ಒಂದರಿಂದ ಎರಡು ಅಡಿ ಹಿಮದಿಂದ ಆವೃತವಾಗಿರುವುದರಿಂದ ಜನರು ತಮ್ಮ ಕಾರುಗಳ ಒಳಗೆ ಸಿಲುಕಿಕೊಂಡರು.

ಮನಾಲಿ, ಜನವರಿ 26: ಹಿಮಾಚಲ ಪ್ರದೇಶದಲ್ಲಿ ಉಂಟಾದ ಭಾರೀ ಹಿಮಪಾತವು (Snowfall) ನೂರಾರು ಪ್ರವಾಸಿಗರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹಿಮಭರಿತ ರಸ್ತೆಗಳು ಮತ್ತು ಭಾರೀ ಟ್ರಾಫಿಕ್ ಜಾಮ್​ನಿಂದಾಗಿ ಮನಾಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿತು. ರಸ್ತೆ ಸಂಪರ್ಕ ಕಡಿತಗೊಂಡ ಕಾರಣದಿಂದಾಗಿ 15 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಿಮಪಾತದಿಂದ ರಸ್ತೆ ಮುಚ್ಚಿದ್ದರಿಂದಾಗಿ ಪ್ರವಾಸಿಗರಿಗೆ ಮುಂದೆ ಸಾಗಲು ಸಾಧ್ಯವಾಗದೆ ಸಿಕ್ಕ ಹೋಟೆಲ್​ಗಳನ್ನೆಲ್ಲ ಬುಕ್ ಮಾಡಿಕೊಂಡರು. ಇದರಿಂದ ಕೆಲವು ಪ್ರವಾಸಿಗರು ಹೋಟೆಲ್ ರೂಂ ಸಿಗದೆ, ಹಿಮಪಾತದಿಂದ ಹೊರಗೂ ಹೋಗಲಾಗದೆ 24 ಗಂಟೆಗಳ ಕಾಲ ಕಾರಿನಲ್ಲೇ ಕುಳಿತಿದ್ದರು. ಹೀಗಾಗಿ, ನೀವು ಕೂಡ ಹಿಮಪಾತ ನೋಡಲು ಮನಾಲಿಗೆ ಪ್ರವಾಸ ಹೋಗುವ ಪ್ಲಾನ್ ಮಾಡಿದ್ದರೆ ಮತ್ತೊಮ್ಮೆ ಯೋಚಿಸುವುದು ಉತ್ತಮ. ಇದು ಅಲ್ಲಿಗೆ ಹೋಗಿರುವ ಪ್ರವಾಸಿಗರೇ ನೀಡಿರುವ ಸಲಹೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ