ಮಸ್ಕಿ ನಾಲಾ ಜಲಾಶಯ ಭರ್ತಿ; 150 ಕ್ಯುಸೆಕ್ಸ್ ನೀರು ಹರಿಬಿಟ್ಟ ನಂತರ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಭೀತಿ
ಶುಕ್ರವಾರದವರೆಗೆ ಒಟ್ಟು 500 ಕ್ಯುಸೆಕ್ಸ್ ನೀರು ಮಸ್ಕಿಯ ನಾಲಾ ಜಲಾಶಯಕ್ಕೆ ಹರಿದು ಬಂದು ನೀರು ಗರಿಷ್ಠ ಮಟ್ಟ ತಲುಪಿರುವುದರಿಂದ ನೀರನ್ನು ಹೊರಗೆ ಹರಿಬಿಡದೆ ವಿಧಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಯಚೂರು: ರಾಜ್ಯದಲ್ಲಿ ಈ ವಾರ ಮಳೆಯಾಗದ ಜಿಲ್ಲಿಯೇ ಇದ್ದಂತಿಲ್ಲ. ಬಿಸಿಲು ನಾಡು ಎಂದು ಕರೆಸಿಕೊಳ್ಳುವ ರಾಯಚೂರಿನಲ್ಲೂ (Raichur) ಮಳೆಯಾಗುತ್ತಿದೆ. ನಿಮಗೆ ವಿಡಿಯೋನಲ್ಲಿ ಕಾಣುತ್ತಿರೋದು ರಾಯಚೂರಿನಿಂದ ಸುಮಾರು 80 ಕಿಮೀ ದೂರದಲ್ಲಿರುವ ಮಸ್ಕಿ ನಾಲಾ ಜಲಾಶಯದ್ದು (Maski Nala Reservoir). ಇದರ ಜಲಾನಯನ ಪ್ರದೇಶದಲ್ಲಿ ಎರಡೂ ಮೂರು ದಿನಗಳಿಂದ ಜೋರು ಮಳೆಯಾಗುತ್ತಿದೆ (heavy rains). ಮಳೆ ಯಾವ ಮಟ್ಟಿಗೆ ಸುರಿದಿದೆ ಎಂದರೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಬತ್ತಿ ಹೋದಂತೆ ಕಾಣುವ ಜಲಾಶಯ ಗರಿಷ್ಠಮಟ್ಟದವರೆಗೆ ತುಂಬಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ವಾರದಲ್ಲಿ ಜಲಾಶಯಕ್ಕೆ ನೀರಿನ ಒಳಹರಿವು ಮಿತಿಮೀರಿದೆ.
ಶುಕ್ರವಾರದವರೆಗೆ ಒಟ್ಟು 500 ಕ್ಯುಸೆಕ್ಸ್ ನೀರು ಮಸ್ಕಿಯ ನಾಲಾ ಜಲಾಶಯಕ್ಕೆ ಹರಿದು ಬಂದು ನೀರು ಗರಿಷ್ಠ ಮಟ್ಟ ತಲುಪಿರುವುದರಿಂದ ನೀರನ್ನು ಹೊರಗೆ ಹರಿಬಿಡದೆ ವಿಧಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರದಂದು 150 ಕ್ಯುಸೆಕ್ಸ್ ನೀರನ್ನು ಹೊರಗೆ ಹರಿಬಿಡುವ ನಿರ್ಣಯ ತೆಗೆದುಕೊಂಡು ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ಜಲಾಶಯದ ಜಲಾನಯನದ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದ್ದು ಸುರಕ್ಷಿತ ಸ್ಥಳಗಳಿಗೆ ಹೋಗಲು ಅವರಿಗೆ ತಿಳಿಸಲಾಗಿದೆ. ಜಲಾಶಯದ ಕೇವಲ ಒಂದು ಗೇಟ್ ಮೂಲಕ 150 ಕ್ಯುಸೆಕ್ಸ್ ನೀರು ಹರಿಬಿಡಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರಿದ ಮಳೆ: ಧಾರವಾಡ, ದಾವಣಗೆರೆ, ಹಾವೇರಿಯಲ್ಲಿ ಶಾಲೆಗಳಿಗೆ ರಜೆ, ಉತ್ತರ ಕನ್ನಡದಲ್ಲಿ ಭೂ ಕುಸಿತದ ಆತಂಕ