ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು

Updated on: Sep 05, 2025 | 9:09 PM

ಮಹಾರಾಜ ಯಶವಂತ್ ರಾವ್ ಆಸ್ಪತ್ರೆಯ (MYH) ಐಸಿಯುನಲ್ಲಿ ದಾಖಲಾಗಿದ್ದ ಎರಡು ನವಜಾತ ಶಿಶುಗಳನ್ನು ಇಲಿಗಳು ಕಚ್ಚಿದ್ದರಿಂದ ಎರಡೂ ಸಾವನ್ನಪ್ಪಿವೆ. ಈ ಘಟನೆಯ ನಂತರ, ಆಸ್ಪತ್ರೆ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದು, ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಹಲವಾರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಆಸ್ಪತ್ರೆಯ ವಿಭಾಗದ ಮುಖ್ಯಸ್ಥರು ಮತ್ತು ಇತರ ಜವಾಬ್ದಾರಿಯುತ ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ ಹೊರಿಸಿ ನೋಟಿಸ್ ನೀಡಲಾಗಿದೆ. ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಬ್ರಜೇಶ್ ಲಹೋಟಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಇಂದೋರ್, ಸೆಪ್ಟೆಂಬರ್ 5: ಮಧ್ಯಪ್ರದೇಶದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ಇಂದೋರ್‌ನ (Indore Hospital) ಮಹಾರಾಜ ಯಶವಂತ್ ರಾವ್ ಆಸ್ಪತ್ರೆ (ಎಂ.ವೈ. ಆಸ್ಪತ್ರೆ)ಯಲ್ಲಿ ಹೃದಯವಿದ್ರಾವಕ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೀವಗಳನ್ನು ಉಳಿಸುವ ಆಸ್ಪತ್ರೆಯಲ್ಲಿ ಆಗಷ್ಟೇ ಜನಿಸಿದ ಶಿಶುಗಳು ಆಸ್ಪತ್ರೆಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿವೆ. ಐಸಿಯುನಲ್ಲಿದ್ದ 2 ನವಜಾತ ಶಿಶುಗಳನ್ನು ಇಲಿಗಳು ಕಚ್ಚಿ (Rat Bite) ಕೊಂದಿವೆ.

ಮಹಾರಾಜ ಯಶವಂತ್ ರಾವ್ ಆಸ್ಪತ್ರೆಯ (MYH) ಐಸಿಯುನಲ್ಲಿ ದಾಖಲಾಗಿದ್ದ ಎರಡು ನವಜಾತ ಶಿಶುಗಳನ್ನು ಇಲಿಗಳು ಕಚ್ಚಿದ್ದರಿಂದ ಎರಡೂ ಸಾವನ್ನಪ್ಪಿವೆ. ಈ ಘಟನೆಯ ನಂತರ, ಆಸ್ಪತ್ರೆ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದು, ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಹಲವಾರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಆಸ್ಪತ್ರೆಯ ವಿಭಾಗದ ಮುಖ್ಯಸ್ಥರು ಮತ್ತು ಇತರ ಜವಾಬ್ದಾರಿಯುತ ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ ಹೊರಿಸಿ ನೋಟಿಸ್ ನೀಡಲಾಗಿದೆ. ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಬ್ರಜೇಶ್ ಲಹೋಟಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ