ತಮಿಳುನಾಡಿನ ಕಡಲೂರಿನ ಕಾರ್ಖಾನೆ ದುರಂತ; ಒಳಚರಂಡಿ ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ

Updated on: May 15, 2025 | 2:47 PM

ಪ್ರಬಲ ಸ್ಫೋಟದಿಂದ ಕಾರ್ಖಾನೆ ಆವರಣಕ್ಕೆ ಭಾರಿ ಹಾನಿಯಾಗಿದ್ದು, ಇದು ಹತ್ತಿರದ ವಸತಿ ಪ್ರದೇಶಗಳ ಮೇಲೂ ಪರಿಣಾಮ ಬೀರಿದೆ. ಈ ಸ್ಫೋಟದ ಬಲದಿಂದ ಟ್ಯಾಂಕ್‌ನಿಂದ ಒಳಚರಂಡಿ ನೀರು ಭಾರಿ ಪ್ರಮಾಣದಲ್ಲಿ ಸೋರಿಕೆಯಾಗಿ, ಗ್ರಾಮದೊಳಗೆ ನುಗ್ಗಿದೆ. ಇದರಿಂದ ಹಲವಾರು ಮನೆಗಳಿಗೆ ಹಾನಿಯಾಗಿ ನಿವಾಸಿಗಳಲ್ಲಿ ಭೀತಿ ಉಂಟಾಗಿದೆ. ತುರ್ತು ಸೇವೆಗಳು ತಕ್ಷಣ ಪ್ರತಿಕ್ರಿಯಿಸಿದವು ಮತ್ತು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಸ್ಥಳೀಯ ಅಧಿಕಾರಿಗಳು ಪ್ರಸ್ತುತ ಹಾನಿಯ ಪ್ರಮಾಣವನ್ನು ನಿರ್ಣಯಿಸುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಕಡಲೂರು, ಮೇ 15: ಬುಧವಾರ ರಾತ್ರಿ ತಮಿಳುನಾಡಿನ (Tamil Nadu) ಕಡಲೂರು ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಒಳಚರಂಡಿ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ 20 ಜನರು ಗಾಯಗೊಂಡಿದ್ದಾರೆ. ಕಡಲೂರು ಜಿಲ್ಲೆಯ ಮುಧುನಗರ ಬಳಿಯ ಕುಡಿಕಾಡು ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಬಲ ಸ್ಫೋಟದಿಂದ ಕಾರ್ಖಾನೆ ಆವರಣಕ್ಕೆ ಭಾರಿ ಹಾನಿಯಾಗಿದ್ದು, ಹತ್ತಿರದ ವಸತಿ ಪ್ರದೇಶಗಳಿಗೂ ಹಾನಿಯಾಗಿದೆ. ಟ್ಯಾಂಕ್‌ನಿಂದ ಒಳಚರಂಡಿ ನೀರು ಭಾರಿ ಪ್ರಮಾಣದಲ್ಲಿ ಸೋರಿಕೆಯಾಗಿ, ಗ್ರಾಮಕ್ಕೆ ನುಗ್ಗಿ, ಹಲವಾರು ಮನೆಗಳಿಗೆ ಹಾನಿಯಾಗಿ ನಿವಾಸಿಗಳಲ್ಲಿ ಭೀತಿ ಉಂಟಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ