ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ? ವಿಶ್ವಾಸದಲ್ಲಿ ಡಿಕೆಶಿ ಆಪ್ತ ಶಾಸಕರು
ಕಾಂಗ್ರೆಸ್ ಮನೆಯಲ್ಲಿನ ಸಿಎಂ ಕುರ್ಚಿ ಕಾಳಗಕ್ಕೆ ಸದ್ಯ ಜನವರಿ 15ರವರೆಗೆ ಅಲ್ಪವಿರಾಮ ಬಿದ್ದಿದೆ. ಆದ್ರೆ ಪಟ್ಟದ ಪಗಡೆಯಾಟೆ ಮಾತ್ರ ಕಂಡು ಕಾಣದಂತೆ ಒಳಗೊಳಗೆ ನಡೀತಾನೆ ಇದೆ. ಈ ಪೈಕಿ ಸಿಎಂ ಸಿದ್ದರಾಮಯ್ಯ ಬಣ ಉರುಳಿಸಿರುವ ಅಹಿಂದ ಶಕ್ತಿ ಪ್ರದರ್ಶನವೂ ಒಂದು. ಸಿದ್ದು ತವರು ಮೈಸೂರು ಅಹಿಂದ ಸಮಾವೇಶಕ್ಕೆ ಸಜ್ಜಾಗ್ತಿದೆ. ಇದರ ನಡುವೆ ಜನವರಿ 6 ಅಥವಾ 9ಕ್ಕೆ ಡಿಕೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದು ಡಿಕೆಶಿ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಶರಣರನ್ನು ಮುಂದಿಟ್ಟು ಹೇಳಿದ್ದಾರೆ.
ರಾಮನಗರ, (ಡಿಸೆಂಬರ್ 29): ಕಾಂಗ್ರೆಸ್ ಮನೆಯಲ್ಲಿನ ಸಿಎಂ ಕುರ್ಚಿ ಕಾಳಗಕ್ಕೆ ಸದ್ಯ ಜನವರಿ 15ರವರೆಗೆ ಅಲ್ಪವಿರಾಮ ಬಿದ್ದಿದೆ. ಆದ್ರೆ ಪಟ್ಟದ ಪಗಡೆಯಾಟೆ ಮಾತ್ರ ಕಂಡು ಕಾಣದಂತೆ ಒಳಗೊಳಗೆ ನಡೀತಾನೆ ಇದೆ. ಈ ಪೈಕಿ ಸಿಎಂ ಸಿದ್ದರಾಮಯ್ಯ (Siddaramaiah) ಬಣ ಉರುಳಿಸಿರುವ ಅಹಿಂದ ಶಕ್ತಿ ಪ್ರದರ್ಶನವೂ ಒಂದು. ಸಿದ್ದು ತವರು ಮೈಸೂರು ಅಹಿಂದ ಸಮಾವೇಶಕ್ಕೆ ಸಜ್ಜಾಗ್ತಿದೆ. ಇದರ ನಡುವೆ ಜನವರಿ 6 ಅಥವಾ 9ಕ್ಕೆ ಡಿಕೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದು ಡಿಕೆಶಿ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಶರಣರನ್ನು ಮುಂದಿಟ್ಟು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಮಾತನಾಡಿರುವ ಕೈ ಶಾಸಕ ಇಕ್ಬಾಲ್ ಹುಸೇನ್, ಜನವರಿ 6 ಅಥವಾ 9ಕ್ಕೆ ಡಿಕೆ ಅಧಿಕಾರ ಹಿಡಿಯುತ್ತಾರೆ. 200 ಪರ್ಸೆಂಟ್ ಈ ಎರಡು ಡೇಟ್ನಲ್ಲಿ ಅಧಿಕಾರ ಸಿಗಲಿದೆ. ಈಗಲು ಸಹ ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ನನಗೆ ವಿಶ್ವಾಸವಿದೆ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ. ಶರಣರು ಹೇಳುವ ಮಾತು ಸತ್ಯವಾಗುತ್ತದೆ. ಅಧಿಕಾರ ಹಂಚಿಕೆ ಬಗ್ಗೆ ನಮ್ಮ ನಾಯಕರು ಹೇಳಿದ್ದಾರೆ ಅಲ್ವಾ. ಹಾಗಾಗಿ ನನಗೆ ಈ ಬಗ್ಗೆ ನಂಬಿಕೆ ಇದೆ. ಭಗವಂತ ನಮ್ಮ ಬೇಡಿಕೆ ಈಡೇರಿಸುತ್ತಾನೆ ಎಂದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
