ಮೈಸೂರು: ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ

| Updated By: ವಿವೇಕ ಬಿರಾದಾರ

Updated on: Dec 14, 2024 | 1:26 PM

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹನುಮ ಜಯಂತಿಯ ಪ್ರಯುಕ್ತ 650ಕ್ಕೂ ಹೆಚ್ಚು ಜನರು 33 ಗಂಟೆ 33 ನಿಮಿಷಗಳ ಕಾಲ ನಿರಂತರವಾಗಿ ಹನುಮಾನ್ ಚಾಲೀಸಾ ಪಾರಾಯಣ ಮಾಡಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದು ಹಿಂದಿನ ವಡೋದರದ 27 ಗಂಟೆಗಳ ದಾಖಲೆಯನ್ನು ಮೀರಿದೆ. ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಯ ಪ್ರತಿನಿಧಿಯೊಬ್ಬರು ಈ ಘಟನೆಗೆ ಸಾಕ್ಷಿಯಾಗಿದ್ದರು.

ಮೈಸೂರು, ಡಿಸೆಂಬರ್​ 14: ಹನುಮ ಜಯಂತಿ ಹಿನ್ನೆಲೆಯಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ 650ಕ್ಕೂ ಹೆಚ್ಚು ಜನರು ಸತತವಾಗಿ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ ಮಾಡುವ ಮೂಲಕ ಗಿನ್ನಿಸ್ ವಿಶ್ವ​ ದಾಖಲೆಯಾಗಿದೆ. ಗಿನ್ನಿಸ್​ ವಿಶ್ವ ದಾಖಲೆ ಸಂಸ್ಥೆಯ ಪ್ರತಿನಿಧಿ ಸ್ವಪ್ನಿಲ್​ ಡಂಗರಿಕರ್​ ಅವರು ಬಂದಿದ್ದರು. ಈ ಹಿಂದೆ ವಡೋದರದಲ್ಲಿ 27 ಗಂಟೆ ಪಾರಾಯಣ ಮಾಡಿ ಗಿನ್ನಿಸ್ ದಾಖಲೆಯಾಗಿತ್ತು.