ದೂರುಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷೆ ಮತ್ತು ಔಷಧ ನಿಯಂತ್ರಣ ಇಲಾಖೆಗಳ ವಿಲೀನ ಅನಿವಾರ್ಯ: ದಿನೇಶ್ ಗುಂಡೂರಾವ್
ಅಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ-ಎರಡು ಇಲಾಖೆಗಳನ್ನು ವಿಲೀನ ಮಾಡುವ ಯೋಚನೆ ಬಹಳ ದಿನಗಳಿಂದ ಇತ್ತು, ಇದಕ್ಕೆ ಸಂಬಂಧಪಟ್ಟ ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ, ಇಲಾಖೆಗಳನ್ನು ಒಬ್ಬ ಕಮೀಶನರ್ ಅಧೀನಕ್ಕೆ ಒಳಪಡಿಸಿ ಆಡಳಿತಾತ್ಮಕ ವ್ಯವಸ್ಥೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ, ಔಷಧಿಗಳ ಗುಣಮಟ್ಟದ ಬಗ್ಗೆ ದೂರುಗಳು ಬರುತ್ತಿರುವುದರಿಂದ ಇದು ಅನಿವಾರ್ಯವಾಗಿತ್ತು ಎಂದು ಸಚಿವ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೈದರಾಬಾದ್ನಲ್ಲಿ ನಟ ಅಲ್ಲು ಅರ್ಜುನ್ ಅವರ ಬಂಧನ ಬಗ್ಗೆ ತನಗೆ ಹೆಚ್ಚು ಮಾಹಿತಿ ಇಲ್ಲ, ಘಟನೆ ಹೇಗೆ ನಡೆಯಿತು, ಯಾಕೆ ನಡೆಯಿತು ಅನ್ನೋದರ ಬಗ್ಗೆ ಮಾಹಿತಿ ಇದ್ದಿದ್ದರೆ ಮಾತಾಡಬಹುದಿತ್ತು, ನಟನ ವಿರುದ್ಧ ಯಾರೋ ದೂರು ಸಲ್ಲಿಸಿದ್ದಾರೆ ಮತ್ತು ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಿ ಇವತ್ತು ಬಿಡುಗಡೆ ಮಾಡಲಾಗಿದ್ದು ಅವರು ಮನೆಗೂ ಕೂಡ ವಾಪಸ್ಸು ಬಂದಿದ್ದಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭ್ರಷ್ಟರಿಗಿಂತ ಅಲ್ಲು ಅರ್ಜುನ್ ಎಷ್ಟೋ ವಾಸಿ: ತೆಲಂಗಾಣ ಸಿಎಂಗೆ ಕೇಂದ್ರ ಸಚಿವ ಬಂಡಿ ಸಂಜಯ್ ತಿರುಗೇಟು
Latest Videos