Kolar: ಚೀಟಿ ಹೆಸರಲ್ಲಿ 4 ಕೋಟಿ ಮಕ್ಮಲ್​​ ಟೋಪಿ; ಕಣ್ಣೀರು ಹಾಕಿದ ಸಂತ್ರಸ್ತರು

Edited By:

Updated on: Feb 03, 2026 | 5:55 PM

ಕೋಲಾರ ನಗರದ ಶಾಂತಿನಗರದಲ್ಲಿ ಚೀಟಿ ಹೆಸರಲ್ಲಿ ಸುಮಾರು 4 ಕೋಟಿ ರೂ. ವಂಚನೆಯ ಆರೋಪ ಕೇಳಿಬಂದಿದೆ. ವೆಂಕಟೇಶಪ್ಪ, ಗೌರಮ್ಮ ಹಾಗೂ ಪದ್ಮಾವತಿ ವಿರುದ್ಧ ದೂರು ದಾಖಲಾಗಿದ್ದು, 500ಕ್ಕೂ ಹೆಚ್ಚು ನಿವಾಸಿಗಳು ತಮಗಾದ ಅನ್ಯಾಯಕ್ಕೆ ನ್ಯಾಯ ಕೋರಿದ್ದಾರೆ. ಸಂತ್ರಸ್ತರು ಪೊಲೀಸ್​​ ಠಾಣೆ ಬಳಿ ಕಣ್ಣೀರು ಹಾಕಿದ ಪ್ರಸಂಗವೂ ನಡೆದಿದೆ.

ಕೋಲಾರ, ಫೆಬ್ರವರಿ 03: ಪಟಾಕಿ ಚೀಟಿ, ಯುಗಾದಿ ಚೀಟಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿರುವ ಆರೋಪ ಕೋಲಾರದ ಶಾಂತಿ ನಗರದಲ್ಲಿ ಕೇಳಿಬಂದಿದೆ. ವೆಂಕಟೇಶಪ್ಪ, ಗೌರಮ್ಮ ಹಾಗೂ ಪದ್ಮಾವತಿ ವಿರುದ್ಧ ದೂರು ಕೇಳಿಬಂದಿದ್ದು, ಕಳೆದ ಒಂದು ವರ್ಷದಿಂದ ಚೀಟಿ ಹಾಕಿದ್ದ ಜನರು ಕಂಗಾಲಾಗಿದ್ದಾರೆ. ಕೋಲಾರದ ಕಾರಂಜಿಕಟ್ಟೆಯ 500ಕ್ಕೂ ಹೆಚ್ಚು ನಿವಾಸಿಗಳಿಗೆ ಸುಮಾರು 4 ಕೋಟಿ ರೂಪಾಯಿಗಳಷ್ಟು ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಶಾಂತಿನಗರ ಒಂದರಲ್ಲೇ 94,52,000 ವಂಚನೆ ಮಾಡಲಾಗಿದೆ ಎಂದು ಹೇಳಲಾಗಿದೆ. ದೀಪಾವಳಿ, ಯುಗಾದಿ, ವರಮಹಾಲಕ್ಷ್ಮೀ ಹಬ್ಬದ ಹೆಸರಿನಲ್ಲಿ ಆರೋಪಿಗಳು ಚೀಟಿ ವ್ಯವಹಾರ ನಡೆಸಿದ್ದರು ಎನ್ನಲಾಗಿದ್ದು, ಕೋಲಾರ ನಗರ ಠಾಣೆ ಮುಂದೆ ಹಣ ಕಳೆದುಕೊಂಡವರು ಕಣ್ಣೀರು ಹಾಕಿದ್ದಾರೆ. ಪ್ರಕರಣ ಸಂಬಂಧ ಸದ್ಯ ವೆಂಕಟೇಶಪ್ಪನನ್ನು ವಶಕ್ಕೆ ಪಡೆದಿರುವ ಕೋಲಾರ ಠಾಣೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 03, 2026 05:55 PM
Follow Us
Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More