ರಾಮಮಂದಿರಕ್ಕೆ ಕರ್ನಾಟಕದಿಂದ 51 ಅಡಿ ಕೇಸರಿ ಧ್ವಜ ಅರ್ಪಣೆ

ರಾಮಮಂದಿರಕ್ಕೆ ಕರ್ನಾಟಕದಿಂದ 51 ಅಡಿ ಕೇಸರಿ ಧ್ವಜ ಅರ್ಪಣೆ

H P
| Updated By: ವಿವೇಕ ಬಿರಾದಾರ

Updated on: Jan 19, 2024 | 9:55 AM

ಕರ್ನಾಟಕದ ಅನೇಕ ಕಲಾವಿದರು ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಕನ್ನಡಿಗರು ರಾಮಮಂದಿರಕ್ಕೆ ಅತೀ ದೊಡ್ಡ ಕೇಸರಿ ಧ್ವಜವನ್ನು ಅರ್ಪಣೆ ಮಾಡಿದ್ದಾರೆ. ಕರ್ನಾಟಕದಿಂದ ಅಯೋಧ್ಯೆಗೆ ಜೀಪ್​ನಲ್ಲಿ ತೆರಳಿ 51 ಅಡಿ ಭಗವಾ ಧ್ವಜವನ್ನು ಶ್ರೀರಾಮಜನ್ಮ ಭೂಮಿ ಟ್ರಸ್ಟ್​ಗೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರಕ್ಕೆ ಕರ್ನಾಟಕದ ಕೊಡುಗೆ ಅಧಿಕವಾಗಿದೆ. ಪ್ರಮುಖವಾಗಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಲಲ್ಲಾ ವಿಗ್ರಹ ಮೈಸೂರಿನಲ್ಲಿ ತಯಾರಾಗಿದೆ. ಅಲ್ಲದೇ ಕರ್ನಾಟಕದ ಅನೇಕ ಕಲಾವಿದರು ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಕನ್ನಡಿಗರು ರಾಮಮಂದಿರಕ್ಕೆ ಅತೀ ದೊಡ್ಡ ಕೇಸರಿ ಧ್ವಜವನ್ನು ಅರ್ಪಣೆ ಮಾಡಿದ್ದಾರೆ. ಕರ್ನಾಟಕದಿಂದ ಅಯೋಧ್ಯೆಗೆ ಜೀಪ್​ನಲ್ಲಿ ತೆರಳಿ 51 ಅಡಿ ಉದ್ದದ ಭಗವಾ ಧ್ವಜವನ್ನು ಶ್ರೀರಾಮಜನ್ಮ ಭೂಮಿ ಟ್ರಸ್ಟ್​ಗೆ ನೀಡಿದ್ದಾರೆ. ಕನ್ನಡಿಗರು ಅನೇಕ ವರ್ಷಗಳ ಹಿಂದೆ ಧ್ವಜ ನೀಡುವ ಸಂಕಲ್ಪ ಹೊಂದಿದ್ದರು.