ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು

Updated on: Aug 06, 2025 | 8:20 PM

ಮೈಸೂರಿಗೆ ತೆರಳುತ್ತಿದ್ದ ರೈಲಿನ (Train) ಆರು ಬೋಗಿಗಳು ಬೇರ್ಪಟ್ಟು ತುಂಗಾ ನದಿ ಸೇತುವೆ ಮೇಲೆಯೇ ನಿಂತಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ದೊಡ್ಡ ದುರಂತವೊಂದು ತಪ್ಪಿದೆ. ರೈಲು ಸಂಖ್ಯೆ 16205 ತಾಳಗುಪ್ಪದಿಂದ ಮೈಸೂರಿಗೆ ಹೊರಟಿತ್ತು. ರೈಲು ಶಿವಮೊಗ್ಗ (Shivamogga) ನಗರದ ಹೊಳೆ ಬಸ್ ನಿಲ್ದಾಣ ಬಳಿ ಇರುವ ತುಂಗಾ ಸೇತುವೆ ಮೇಲೆ ಬರುತ್ತಿದ್ದಂತೆ ಏಕಾಏಕಿ 6 ಬೋಗಿಗಳು ರೈಲಿನಿಂದ ಬೇರ್ಪಟ್ಟಿವೆ.

ಶಿವಮೊಗ್ಗ, ಆಗಸ್ಟ್​ 06): ಮೈಸೂರಿಗೆ ತೆರಳುತ್ತಿದ್ದ ರೈಲಿನ (Train) ಆರು ಬೋಗಿಗಳು ಬೇರ್ಪಟ್ಟು ತುಂಗಾ ನದಿ ಸೇತುವೆ ಮೇಲೆಯೇ ನಿಂತಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ದೊಡ್ಡ ದುರಂತವೊಂದು ತಪ್ಪಿದೆ. ರೈಲು ಸಂಖ್ಯೆ 16205 ತಾಳಗುಪ್ಪದಿಂದ ಮೈಸೂರಿಗೆ ಹೊರಟಿತ್ತು. ರೈಲು ಶಿವಮೊಗ್ಗ (Shivamogga) ನಗರದ ಹೊಳೆ ಬಸ್ ನಿಲ್ದಾಣ ಬಳಿ ಇರುವ ತುಂಗಾ ಸೇತುವೆ ಮೇಲೆ ಬರುತ್ತಿದ್ದಂತೆ ಏಕಾಏಕಿ 6 ಬೋಗಿಗಳು ರೈಲಿನಿಂದ ಬೇರ್ಪಟ್ಟಿವೆ. ಉಳಿದ ಬೋಗಿಗಳು ಇಂಜಿನ ಜೊತೆ ಮುಂದೆ ಸಾಗಿವೆ. ರೈಲು ಸ್ವಲ್ಪ ದೂರ ಮುಂದೆ ಹೋಗಿ ನಿಂತಿದೆ.