ಕೊರೊನಾ ನೆಪದಲ್ಲಿ.. ಭಿಕ್ಷುಕನನ್ನು ಶುಚಿಗೊಳಿಸುವಾಗ ಸಿಕ್ತು ಹಳೇ ಗಂಟು ಗಂಟು ಹಣ!

| Updated By: ಸಾಧು ಶ್ರೀನಾಥ್​

Updated on: Aug 28, 2020 | 10:44 AM

[lazy-load-videos-and-sticky-control id=”Kf–3LWaJso”] ನೆಲಮಂಗಲ: ಕೊಳಕು ಬಟ್ಟೆ, ಸ್ನಾನ ಇಲ್ಲದ ದೇಹ ಆತನ ಹತ್ತಿರ ಹೋಗಲು ಜನ ಹಿಂಜರಿಯುತ್ತಿದ್ದರು. ಜನರಿಂದ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. ಅವನ ಬಳಿ ಹಳೇ ಬಟ್ಟೆಗಳ ಗಂಟುಗಳಿತ್ತು. ಆತನನ್ನು ಸ್ವಚ್ಚಗೊಳಿಸಿ ಆ ಗಂಟುಗಳನ್ನ ಎಸೆಯಲು ಮುಂದಾದ ಜನರೇ ಶಾಕ್​ಗೆ ಒಳಗಾದ್ರು. ಆ ಮಾಸಲು ಗಂಟುಗಳಲ್ಲಿಯೇ ಹಳೇ ನೋಟುಗಳಿದ್ದಿದ್ದು. ಅದೂ 60 ಸಾವಿರಕ್ಕೂ ಹೆಚ್ಚು ಹಣ ಆ ಭಿಕ್ಷುಕನ ಬಳಿ ಇತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬರದಿ ಗ್ರಾಮದ ಭಿಕ್ಷುಕ ರಂಗಸ್ವಾಮಯ್ಯ […]

ಕೊರೊನಾ ನೆಪದಲ್ಲಿ.. ಭಿಕ್ಷುಕನನ್ನು ಶುಚಿಗೊಳಿಸುವಾಗ ಸಿಕ್ತು ಹಳೇ ಗಂಟು ಗಂಟು ಹಣ!
Follow us on

[lazy-load-videos-and-sticky-control id=”Kf–3LWaJso”]

ನೆಲಮಂಗಲ: ಕೊಳಕು ಬಟ್ಟೆ, ಸ್ನಾನ ಇಲ್ಲದ ದೇಹ ಆತನ ಹತ್ತಿರ ಹೋಗಲು ಜನ ಹಿಂಜರಿಯುತ್ತಿದ್ದರು. ಜನರಿಂದ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. ಅವನ ಬಳಿ ಹಳೇ ಬಟ್ಟೆಗಳ ಗಂಟುಗಳಿತ್ತು. ಆತನನ್ನು ಸ್ವಚ್ಚಗೊಳಿಸಿ ಆ ಗಂಟುಗಳನ್ನ ಎಸೆಯಲು ಮುಂದಾದ ಜನರೇ ಶಾಕ್​ಗೆ ಒಳಗಾದ್ರು. ಆ ಮಾಸಲು ಗಂಟುಗಳಲ್ಲಿಯೇ ಹಳೇ ನೋಟುಗಳಿದ್ದಿದ್ದು. ಅದೂ 60 ಸಾವಿರಕ್ಕೂ ಹೆಚ್ಚು ಹಣ ಆ ಭಿಕ್ಷುಕನ ಬಳಿ ಇತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬರದಿ ಗ್ರಾಮದ ಭಿಕ್ಷುಕ ರಂಗಸ್ವಾಮಯ್ಯ ಭಿಕ್ಷೆ ಬೇಡಿ ಕೂಡಿಟ್ಟ ಹಣ ನೋಡಿ ಗ್ರಾಮಸ್ಥರು ನಿಜಕ್ಕೂ ಶಾಕ್ ಆಗಿದ್ದಾರೆ. ವರ್ಷಾನುಗಟ್ಟಲೆ ಭಿಕ್ಷೆ ಬೇಡಿದ ಹಣವನ್ನ ಜೋಪಾನವಾಗಿ ಗಂಟುಕಟ್ಟಿ ಕಾಪಾಡಿದ್ದ ಆ ಭಿಕ್ಷುಕ. ಅವನ ಬಳಿಯಿದ್ದ ಗಂಟುಗಳನ್ನ ಬಿಚ್ಚಿ ಎಣಿಸಲು ಶುರು ಮಾಡಿದ ಗ್ರಾಮಸ್ಥರಿಗೆ 60 ಸಾವಿರ ಹಣದ ಲೆಕ್ಕ ಸಿಕ್ಕಿತು.

ಅಂಗವಿಕಲ ಭಿಕ್ಷುಕ ರಂಗಸ್ವಾಮಯ್ಯ ಒಂದು ಹೊತ್ತಿನ ಊಟಕ್ಕೂ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದ. ಹರಿದ ಬಟ್ಟೆ ಕೊಳಕು ದೇಹದ ರಂಗಸ್ವಾಮಯ್ಯನ ಬಳಿ ಜನ ಹೋಗಲು ಹಿಂಜರಿಯುತ್ತಿದ್ದರು. ಕೈಲಾದ ಹಣವ ನೀಡಿ ಸುಮ್ಮನಾಗುತ್ತಿದ್ದರು. ಗ್ರಾಮದಲ್ಲಿ ಮನೆ ಬಳಿ ಬಂದ ಆತನಿಗೆ ಊಟ ನೀಡುತ್ತಿದ್ದರು.

ಹಾಗಾಗಿ ಗ್ರಾಮಸ್ಥರು ನೀಡಿದ ಹಣವನ್ನು ಖರ್ಚು ಮಾಡದೆ ಸುಮಾರು ವರ್ಷಗಳಿಂದ ಹಾಗೆಯೇ ಕೂಡಿಟ್ಟುಕೊಂಡು ಬಂದಿದ್ದ. ಜೊತೆಗೆ ಆತನಿಗೆ ಊರಿನವರ ಸಹಾಯದ ಮೇರೆಗೆ ಅಂಗವಿಕಲ ವೇತನವೂ ದೊರೆಯುತ್ತಿತ್ತು. ಬಂದಂತಹ ಎಲ್ಲಾ ಹಣವನ್ನು ಕೊಳಕು ಕೊಳಕಾದ ಬಟ್ಟೆಗಳಲ್ಲಿ ಗಂಟು ಗಟ್ಟಿ ಕೂಡಿಟ್ಟಿದ್ದ. ಈತನ ಬಳಿ ಹಣ ಇದೆಯೆಂಬ ಸಣ್ಣ ಸುಳಿವು, ಯೋಚನೆಯೂ ಗ್ರಾಮಸ್ಥರಲ್ಲಿ ಇರಲಿಲ್ಲ.

ಕೊರೊನಾ ನೆಪವೊಡ್ಡಿ ಆಕಸ್ಮಿಕವಾಗಿ ಕೊಳಕಾದ ಬಟ್ಟೆಯ ಗಂಟುಗಳನ್ನ ಎಸೆಯಲು ಮುಂದಾದ ಗ್ರಾಮಸ್ಥರಿಗೆ ಎಸೆಯಬೇಡಿ, ಅದರಲ್ಲಿ ಹಣವಿದೆ ಎಂದು ಅಂಗವಿಕಲ ಭಿಕ್ಷುಕ ರಂಗಸ್ವಾಮಯ್ಯ ತಿಳಿಸಿದಾಗ ಗ್ರಾಮಸ್ಥರು ಕೊಳಕು ಬಟ್ಟೆಯಲ್ಲಿದ್ದ ನೋಟು ರೂಪದ ಹಣವನ್ನು ಒಂದು ಕಡೆ ಗುಡ್ಡೆ ಹಾಕಿ ಅದನ್ನು ಎಣಿಸಲು ಶುರು ಮಾಡಿದ್ದಾಗ ಗ್ರಾಮಸ್ಥರಿಗೆ 60 ಸಾವಿರಕ್ಕೂ ಹೆಚ್ಚು ಹಣದ ಲೆಕ್ಕ ಸಿಕ್ಕಿದೆ. ಅಂಗವಿಕಲ ಭಿಕ್ಷುಕನಾದ ರಂಗಸ್ವಾಮಯ್ಯನ ಬಳಿಯಿದ್ದ ಹಣ ಎಲ್ಲೂ ದುರ್ಬಳಕೆ, ದುರುಪಯೋಗ ಆಗಬಾರದು ಎಂಬ ಹಿತದೃಷ್ಟಿಯಿಂದ ಗ್ರಾಮಸ್ಥರು ಇದೀಗ ಬ್ಯಾಂಕ್ ಖಾತೆ ತರೆಯುವ ಚಿಂತನೆ ನಡೆಸಿದ್ದಾರೆ.

Published On - 10:40 am, Fri, 28 August 20