ತೆಲಂಗಾಣದ ವೃದ್ಧ ಶ್ರೀನಿವಾಸ ಶಾಸ್ತ್ರಿ ಪಾದುಕೆ ಹೊತ್ತು ಅಯೋಧ್ಯೆಯತ್ತ ಪಾದಯಾತ್ರೆ

|

Updated on: Jan 10, 2024 | 4:14 PM

ರಾಮ ಭಕ್ತ ಚಲ್ಲಾ ಶ್ರೀನಿವಾಸ್ ಶಾಸ್ತ್ರಿ ಜುಲೈ 20 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಹಿಮ್ಮುಖ ಕ್ರಮವನ್ನು ಅನುಸರಿಸಿ ದಾರಿಯುದ್ದಕ್ಕೂ ಭಗವಾನ್ ರಾಮ ಸ್ಥಾಪಿಸಿದ ಶಿವಲಿಂಗ ಸ್ಥಳಗಳಲ್ಲಿ ತಾನು ಪ್ರಯಾಣ ನಿಲ್ಲಿಸಿ, ಮತ್ತೆ ಮುಂದುವರಿಸುವುದಾಗಿ ಹೇಳಿದ್ದಾರೆ.

ಹೈದರಾಬಾದ್‌ನ 64 ವರ್ಷದ ವೃದ್ಧರಾದ ಚಲ್ಲಾ ಶ್ರೀನಿವಾಸ್ ಶಾಸ್ತ್ರಿ ಅವರು ರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೂ ಮುನ್ನ ‘ಚರಣ ಪಾದುಕೆ’ಯನ್ನು ಹೊತ್ತು ಅಯೋಧ್ಯೆಯತ್ತ 7,200 ಕಿಲೋ ಮೀಟರ್ ಪಾದಯಾತ್ರೆ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ನಿನ್ನೆ ಮಂಗಳವಾರ ಎಎನ್‌ಐ ಜೊತೆ ಮಾತನಾಡಿದ ಚಲ್ಲಾ ಶ್ರೀನಿವಾಸ್ ಶಾಸ್ತ್ರಿ ಅವರು ರಾಮನ ವನವಾಸ ಪ್ರಯಾಣವನ್ನು ಪ್ರತಿಬಿಂಬಿಸುವ ಮೂಲಕ ಅಯೋಧ್ಯೆ-ರಾಮೇಶ್ವರಂ ಮಾರ್ಗದಲ್ಲಿ ತಾನು ಪಾದಯಾತ್ರೆ ಮಾಡುತ್ತಿದ್ದು, ಜನವರಿ 15 ರಂದು ಅಯೋಧ್ಯೆಗೆ ತಲುಪುವ ಅಂದಾಜಿದೆ ಎಂದು ಹೇಳಿದ್ದಾರೆ.

8 ಕೆಜಿ ಬೆಳ್ಳಿಯನ್ನು ಬಳಸಿ ಈ ‘ಚರಣ ಪಾದುಕಾ’ವನ್ನು ತಯಾರಿಸಿದ್ದೇನೆ. ಅದಕ್ಕೆ ಚಿನ್ನದ ಲೇಪನ ಮಾಡಿದ್ದೇನೆ. ಜನವರಿ 16 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಈ ಪಾದುಕೆ ಹಸ್ತಾಂತರಿಸುವುದಾಗಿ ಅವರು ತಿಳಿಸಿದ್ದಾರೆ.

ರಾಮ ಭಕ್ತ ಚಲ್ಲಾ ಶ್ರೀನಿವಾಸ್ ಶಾಸ್ತ್ರಿ ಜುಲೈ 20 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಹಿಮ್ಮುಖ ಕ್ರಮವನ್ನು ಅನುಸರಿಸಿ ದಾರಿಯುದ್ದಕ್ಕೂ ಭಗವಾನ್ ರಾಮ ಸ್ಥಾಪಿಸಿದ ಶಿವಲಿಂಗ ಸ್ಥಳಗಳಲ್ಲಿ ತಾನು ಪ್ರಯಾಣ ನಿಲ್ಲಿಸಿ, ಮತ್ತೆ ಮುಂದುವರಿಸುವುದಾಗಿ ಹೇಳಿದ್ದಾರೆ.

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಜನವರಿ 16 ರಂದು ಪ್ರಾರಂಭವಾಗಿ ಏಳು ದಿನಗಳ ಕಾಲ ನಡೆಯಲಿದೆ. ಅಂತಿಮ ದಿನವಾದ ಜನವರಿ 22 ರಂದು ಬೆಳಿಗ್ಗೆ ಪೂಜೆಯ ನಂತರ, ಮಧ್ಯಾಹ್ನ ’ಮೃಗಶಿರಾ ನಕ್ಷತ್ರ’ದಲ್ಲಿ ರಾಮಲಾಲಾ ದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 10, 2024 04:13 PM