Lalbagh Flower Show 2023: 214ನೇ ಫಲಪುಷ್ಪ ಪ್ರದರ್ಶನಕ್ಕೆ ಲಾಲ್​​ಬಾಗ್​ ಸಜ್ಜು- ಈ ಬಾರಿ ಪರಿಸರ ಸ್ನೇಹಿ ಫ್ಲವರ್​ಶೋ, ಗಮನ ಸೆಳೆಯಲಿವೆ ಲಕ್ಷ ಲಕ್ಷ ಹೂವು

| Updated By: ಸಾಧು ಶ್ರೀನಾಥ್​

Updated on: Jul 26, 2023 | 7:15 PM

Lalbagh Flower Show: ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಆಗಸ್ಟ್ 4ರಿಂದ 15ರವರೆಗೆ ಬೆಂಗಳೂರಿನ ಲಾಲ್​ಬಾಗ್​ನಲ್ಲಿ 214ನೇ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ದೇಶದ 76ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು, ಜುಲೈ 26: ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಆಗಸ್ಟ್ 4ರಿಂದ 15ರವರೆಗೆ ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ (Lalbagh Flower Show) ಏರ್ಪಡಿಸಲಾಗಿದೆ. ದೇಶದ 76ನೇ ಸ್ವಾತಂತ್ರ್ಯ ಮಹೋತ್ಸವದ (Independence Day) ಅಂಗವಾಗಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇದು ಲಾಲ್​ಬಾಗ್​ನಲ್ಲಿ ನಡೆಯಲಿರುವ 214ನೇ ಫಲಪುಷ್ಪ ಪ್ರದರ್ಶನವಾಗಿರಲಿದೆ.

ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಭರದಿಂದ ಸಿದ್ಧತೆ ನಡೆಸುತ್ತಿದೆ. ಈ ಬಾರಿ ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯೊಂದಿಗೆ ಫಲಪುಷ್ಪ ಪ್ರದರ್ಶನ ಸಾಕಾರಗೊಳ್ಳಲಿದೆ. ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ 2 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.

ಗಣರಾಜ್ಯೋತ್ಸವ ಅಂಗವಾಗಿ ಈ ಹಿಂದೆ ಜನವರಿಯಲ್ಲಿ ಫಲಪುಷ್ಪ ಪ್ರದರ್ಶನ ನಡೆದಿತ್ತು. ಜನವರಿ 20ರಿಂದ 30ರವರೆಗೆ 213ನೇ ಫಲಪುಷ್ಪ ಪ್ರದರ್ಶನ ನಡೆದಿತ್ತು. 11 ದೇಶಗಳಿಂದ ತರಿಸಿದ್ದ 69 ವಿವಿಧ ಹೂವುಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿತ್ತು. ಜತೆಗೆ ಹಲವಾರು ಬಗೆಯ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿತ್ತು.

 

Published on: Jul 26, 2023 07:14 PM