76th Hiroshima Day: ಎರಡನೇ ಮಹಾಯುದ್ಧದಲ್ಲಿ ಅಮೆರಿಕಾದ ಸೈನಿಕರ ವಿರುದ್ಧ ಕ್ರೌರ್ಯ ಮೆರೆದ ಜಪಾನ್ ಭಾರಿ ಬೆಲೆ ತೆರಬೇಕಾಯಿತು
ಆಗಸ್ಟ್ 6 ಅನ್ನು ಪ್ರತಿವರ್ಷ ಹಿರೋಶಿಮಾ ದಿನವೆಂದು ಆಚರಿಸಲಾಗುತ್ತದೆ. ಹಿರೊಶಿಮಾ, ಅಣುಬಾಂಬ್ ದಾಳಿಯೊಂದಕ್ಕೆ ತುತ್ತಾದ ಮೊದಲ ನಗರವೆನಿಸಿಕೊಂಡಿದೆ.
ಎರಡನೇ ಜಾಗತಿಕ ಯುದ್ಧದಲ್ಲಿ ಜಪಾನ್ ಅಮೇರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ವಿರುದ್ಧವಾಗಿದ್ದರಿಂದ ಭಾರಿ ದಂಡ ತೆರಬೇಕಾಯಿತು . ಜಪಾನ್ ದೇಶವು ಬ್ರಿಟಿಷ್ ಹಾಗೂ ಅಮೇರಿಕದ ಸೈನಿಕರ ಮೇಲೆ ಕ್ರೌರ್ಯ ಪ್ರದರ್ಶಿಸಿದ್ದರ ಪ್ರತೀಕಾರವಾಗಿ ಅಮೆರಿಕ 1945 ರ ಆಗಸ್ಟ್ 6 ಮತ್ತು 9 ರ ನಡುವೆ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ಪಟ್ಟಣಗಳ ಮೇಲೆ ಅಣುಬಾಂಬ್ ದಾಳಿ ನಡೆಸಿತು. ಈ ಅಣುಬಾಂಬ್ಗಳಿಗೆ ‘ದಿ ಲಿಟ್ಲ್ ಬಾಯ್’ ಮತ್ತು ‘ದಿ ಫ್ಯಾಟ್ ಮ್ಯಾನ್’ ಎಂದು ಹೆಸರಿಡಲಾಗಿತ್ತು.
ಆಗಸ್ಟ್ 6 ಅನ್ನು ಪ್ರತಿವರ್ಷ ಹಿರೋಶಿಮಾ ದಿನವೆಂದು ಆಚರಿಸಲಾಗುತ್ತದೆ. ಹಿರೊಶಿಮಾ, ಅಣುಬಾಂಬ್ ದಾಳಿಯೊಂದಕ್ಕೆ ತುತ್ತಾದ ಮೊದಲ ನಗರವೆನಿಸಿಕೊಂಡಿದೆ. ಹಿರೊಶಿಮಾ ಮೇಲೆ ಬಿದ್ದ ಅಣುಬಾಂಬ್ ಆ ನಗರದ ಶೇಕಡಾ 39 ರಷ್ಟು (ಸುಮಾರು 80,000) ಜನರನ್ನು ಕೊಂದಿತು ಮತ್ತು ಶೇಕಡಾ 69 ರಷ್ಟು ಕಟ್ಟಡಗಳನ್ನು ಧ್ವಂಸಗೊಳಿಸಿತು. ದಶಕಗಳವರೆಗೆ ಅಲ್ಲಿ ಮಕ್ಕಳು ಅಂಗವೈಕಲ್ಯದಿಂದ ಹುಟ್ಟುತ್ತಿದ್ದರು ಎಂದರೆ ಬಾಂಬಿನ ಪರಿಣಾಮ ಹೇಗಿತ್ತು ಎನ್ನವುದನ್ನು ಊಹಿಸಿಕೊಳ್ಳಬಹುದು.
ಹಿರೊಶಿಮಾ ದಿನವನ್ನು ಶಾಂತಿಯ ರಾಜಕಾರಣ ಮತ್ತು ಆ ನಗರದ ಮೇಲೆ ಅಣುಬಾಂಬ್ನಿಂದ ಉಂಟಾದ ಘೋರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ವಿಶ್ವದೆಲ್ಲೆಡೆ ಶಾಂತಿ ನೆಲಸುವಂತಾಗಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಂದಿನದು 76 ನೇ ಹಿರೊಶಿಮಾ ದಿನವಾಗಿದೆ.
ಇದನ್ನೂ ಓದಿ: ವಿಡಿಯೋ ಶೂಟ್ ಮಾಡಲು ಈ ಹೈದರು ಆರಿಸಿಕೊಂಡಿದ್ದು ಒಂದು ಪೊಲೀಸ್ ಸ್ಟೇಶನ್! ಅವರೀಗ ಪೊಲೀಸರ ಅತಿಥಿಗಳು!!