Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿರುವ ವಿಡಿಯೋ ನೋಡಿ

ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿರುವ ವಿಡಿಯೋ ನೋಡಿ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 06, 2025 | 6:40 PM

ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ರಾಮನಗರ ಜಿಲ್ಲೆಗಳಲ್ಲಿ ಕಾಡಾನೆಗಳಿಂದ ರೈತರು ಅದೆಷ್ಟೋ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಇನ್ನು ಈ ಕಾಡಾನೆಗಳು ಹಲವರ ಜೀವ ಬಲಿ ಪಡೆದುಕೊಂಡಿವೆ. ಈಗ ಚಾಮರಾಜನಗರದಲ್ಲಿಂದು ಆನೆ ದಾಳಿಗೆ ವಿದೇಶಿ ಪ್ರಜೆಯೊಬ್ಬರು ಸಾವೀಡಾಗಿದ್ದಾರೆ.

ಕೊಯಮತ್ತೂರು, (ಫೆಬ್ರವರಿ 06): ಕಾಡಾನೆ ದಾಳಿಯಿಂದ (Elephant Attack) ಜರ್ಮನ್ ಪ್ರವಾಸಿಗ (German Tourist) ಸಾವಿಗೀಡಾದ ಘಟನೆ ತಮಿಳುನಾಡಿನ (Tamil Nadu) ಕೊಯಮತ್ತೂರು ಜಿಲ್ಲೆಯ ಎಟಿಆರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಜರ್ಮನ್​ ಮೂಲದ ಮೈಕೆಲ್ ಶುಲ್ಜ್(77) ಮೃತ ದುರ್ವೈವಿ. ಬೈಕ್​ನಲ್ಲಿ ತೆರಳುತ್ತಿದ್ದಾಗ ಮೈಕೆಲ್ ಶುಲ್ಜ್​ ಎನ್ನುವರ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಇದರಿಂದ ಗಾಯಗೊಂಡಿದ್ದ ಮೈಕೆಲ್ ಚಿಕಿತ್ಸೆ ಫಲಕಾರಿಯಾದೇ ಪೊಲ್ಲಾಚಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಟೈಗರ್ ವ್ಯಾಲಿ ರಸ್ತೆಯಲ್ಲಿ ಬೈಕ್‍ನಲ್ಲಿ ತೆರಳುವಾಗ ಆನೆ ಇರುವುದನ್ನು ಗಮನಿಸಿಯೂ ಅವರು ಸಮೀಪ ಹೋಗಿದ್ದಾರೆ. ಈ ವೇಳೆ ಬೈಕ್ ಸಮೇತ ಅವರನ್ನು ಆನೆ ಎತ್ತಿ ಎಸೆದಿದೆ. ಇದರಿಂದ ಅವರು ತೀವ್ರ ಗಾಯಗೊಂಡಿದ್ದು, ಕೂಡಲೇ ಅವರನ್ನು ಪೊಲ್ಲಾಚಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅವರು ಸಾವಿಗೀಡಾಗಿದ್ದಾರೆ.

ಚಳಿಗಾಲದಲ್ಲಿ ಗಂಡಾನೆಗಳಿಗೆ ಹೆಚ್ಚಿನ ಮದವಿರುತ್ತೆ. ಇದರ ಜೊತೆ ಆನೆಗಳು ಸದಾ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚಾರ ನಡೆಕುತ್ತಲೇ ಇರುತ್ವೆ. ಅದರಲ್ಲೂ ಚಾಮರಾಜನಗರ ತಮಿಳುನಾಡು, ಕೇರಳದ ಗಡಿಯನ್ನ ಹಂಚಿ ಕೊಂಡಿವೆ. ಬಂಡೀಪುರದಲ್ಲೇ ರಾಜ್ಯದಲ್ಲೆ ಅತಿ ಹೆಚ್ಚು ಆನೆಗಳನ್ನ ಸಹ ಹೊಂದಿದೆ. ತಮಿಳುನಾಡು ಕೇರಳದಿಂದಲು ಕರ್ನಾಟಕಕ್ಕೆ ಆನೆಗಳ ಮೂಮೆಂಟ್ ಇದೆ. ಹೀಗಾಗಿ ರಸ್ತೆಯಲ್ಲಿ ಕಾಡಾನೆಗಳು ದಾಟುವ ವೇಳೆ ವಾಹನ ಸವಾರರು ಮೈಯಲ್ಲ ಕಣ್ಣಾಗಿ ಇರ್ಬೇಕು ಇಲ್ಲದೆ ಹೋದ್ರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.