ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಮತೆಗೆದುಕೊಳ್ಳಲು ಸರ್ಕಾರ ಯಾಕೆ ಮೀನಮೇಷ ಎಣಿಸುತ್ತಿದೆ?
ಮೂರು ತಿಂಗಳು ಸಾಲದ ಕಂತು ಕಟ್ಟಿರದ ಕಾರಣ ಫೈನಾನ್ಸ್ ಸಂಸ್ಥೆಯರು ಪೊಲೀಸರೊಂದಿಗೆ ಮನೆಗೆ ಬಂದು ಕುಟುಂಬದ ಸದಸ್ಯರ ಮೇಲೆ ದೌರ್ಜನ್ಯವಸಗಿದ್ದಾರೆ. ಪೊಲೀಸರು ಜನರ ರಕ್ಷಣೆ ಮಾಡಬೇಕೇ ಹೊರತು ಫೈನಾನ್ಸ್ ಸಂಸ್ಥೆಗಳು ಎಸೆಯುವ ಬಿಡಿಗಾಸಿಗಾಗಿ ಮನಷ್ಯತ್ವ ಮರೆಯಬಾರದು. ಅಶೋಕ ಅವರು ಪೊಲೀಸರನ್ನು ಸಸ್ಪೆಂಡ್ ಮಾಡುವಂತೆ ಹೇಳುತ್ತಿರೋದು ಅತ್ಯಂತ ಸೂಕ್ತವಾಗಿದೆ.
ಮಂಡ್ಯ: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲು ಅದ್ಯಾಕೆ ಹಿಂಜರಿಯುತ್ತಿದೆಯೋ? ಸುಗ್ರೀವಾಜ್ಞೆ ತರುವ ವಿಚಾರವನ್ನು ಸರ್ಕಾರ ಅರ್ಧಕ್ಕೆ ಕೈಬಿಟ್ಟು ಅದಕ್ಕೆ ಬದಲಾವಣೆ ತಂದು ಜಾರಿಗೊಳಿಸುವ ಯೋಚನೆ ಮಾಡುತ್ತಿದೆಯಂತೆ! ಜಿಲ್ಲೆಯ ಮಳವಳ್ಳಿ ತಾಲೂಕಿನನ ಕೊನ್ನಾಪುರದಲ್ಲಿ ಕುಟುಂಬವೊಂದರ ಇಬ್ಬರು ಸದಸ್ಯರು ಫೈನಾನ್ಸ್ ಸಂಸ್ಥೆಯ ಕಿರುಕುಳ ತಾಳಲಾರದೆ ಸಾವಿಗೆ ಶರಣಾಗಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ ಇಂದು ಗ್ರಾಮಕ್ಕೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೆ ಮಂಡ್ಯ ಜಿಲ್ಲಾಧಿಕಾರಿಗೆ ಫೋನ್ ಮಾಡಿ ಕುಟುಂಬದ ಮೇಲೆ ದೌರ್ಜನ್ಯವೆಸಗಿದ ಪೊಲೀಸರನ್ನು ಸಸ್ಪೆಂಡ್ ಮಾಡುವಂತೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ: ಸುಗ್ರೀವಾಜ್ಞೆಯಲ್ಲಿ ಕೆಲ ಅಂಶ ಬದಲಾವಣೆ