‘ಬೇರೆ ಭಾಷೆಯಲ್ಲಿ ನಟಿಸೋ ಆಸೆ ಇಲ್ಲ, ಕನ್ನಡದಲ್ಲಿ ಒಳ್ಳೆಯ ಚಿತ್ರ ಮಾಡಿದ್ರೆ ದೇಶಾದ್ಯಂತ ರೀಚ್ ಆಗತ್ತೆ’: ರಕ್ಷಿತ್ ಶೆಟ್ಟಿ
777 Charlie | Rakshit Shetty: ನಟ ರಕ್ಷಿತ್ ಶೆಟ್ಟಿ ಅವರು ಹೀರೋ ಆಗಿ ಚಿತ್ರರಂಗಕ್ಕೆ ಬಂದು 10 ವರ್ಷ ಆಗಿದೆ. ಈಗ ‘777 ಚಾರ್ಲಿ’ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ಕರುನಾಡಿನ ಜನರ ಪ್ರೋತ್ಸಾಹದ ಬಗ್ಗೆ ಅವರು ಮಾತನಾಡಿದ್ದಾರೆ.
ಕನ್ನಡದ ನಟರು ಬೇರೆ ಭಾಷೆಯ ಚಿತ್ರರಂಗಕ್ಕೆ ಹೋಗಿ ನಟಿಸುವ ಟ್ರೆಂಡ್ ಮೊದಲಿನಿಂದಲೂ ಇದೆ. ಆದರೆ ಎಲ್ಲ ಕಲಾವಿದರೂ ಈ ಟ್ರೆಂಡ್ ಪಾಲಿಸುವುದಿಲ್ಲ. ಈ ವಿಚಾರದಲ್ಲಿ ರಕ್ಷಿತ್ ಶೆಟ್ಟಿ (Rakshit Shetty) ಅವರು ತಮ್ಮದೇ ಆದ ನಿಯಮ ಅನುಸರಿಸುತ್ತಾರೆ. ಏನೇ ಮಾಡಿದರೂ ಕನ್ನಡದಲ್ಲಿಯೇ ಮಾಡಬೇಕು ಎಂಬ ಉದ್ದೇಶ ಅವರದ್ದು. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಟ ಎಂಬುದಕ್ಕಿಂತಲೂ ಹೆಚ್ಚಾಗಿ ನಾನೊಬ್ಬ ಫಿಲ್ಮ್ ಮೇಕರ್. ಬೇರೆ ಭಾಷೆಯಲ್ಲಿ ಹೋಗಿ ನಟಿಸಬೇಕು ಎಂಬ ಆಸೆ ನನಗೆ ಇಲ್ಲ. ಕನ್ನಡದಲ್ಲಿ (Sandalwood) ಒಳ್ಳೆಯ ಸಿನಿಮಾ ಮಾಡಿದರೆ ಅದು ಭಾರತದಾದ್ಯಂತ ರೀಚ್ ಆಗುತ್ತದೆ. ನಾನು ಚಿತ್ರರಂಗಕ್ಕೆ ಬಂದು 10 ವರ್ಷ ಆಯ್ತು. ನಾನು ರೆಗ್ಯುಲರ್ ಸಿನಿಮಾ ಮಾಡುತ್ತ ಬಂದಿಲ್ಲ. ಆದರೂ ಕೂಡ ಕರ್ನಾಟಕದ ಜನತೆ ನನಗೆ ಕೊಟ್ಟಿರುವ ಪ್ರೋತ್ಸಾಹ ದೊಡ್ಡದು’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಅವರು ನಟಿಸಿರುವ ‘777 ಚಾರ್ಲಿ’ (777 Charlie Movie) ಸಿನಿಮಾ ಜೂನ್ 10ರಂದು ರಿಲೀಸ್ ಆಗುತ್ತಿದೆ. ಟ್ರೇಲರ್ ಮೂಲಕ ಈ ಸಿನಿಮಾ ಸಖತ್ ನಿರೀಕ್ಷೆ ಮೂಡಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.