Minister Zameer Ahmed absent: ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ, ಸಚಿವ ಜಮೀರ್ ಅಹ್ಮದ್ ಆಬ್ಸೆಂಟ್, ಮುಗಿಬಿದ್ದ ಹಿಂದೂ ಸಂಘಟನೆ ಕಾರ್ಯಕಯರ್ತರು

Minister Zameer Ahmed absent: ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ, ಸಚಿವ ಜಮೀರ್ ಅಹ್ಮದ್ ಆಬ್ಸೆಂಟ್, ಮುಗಿಬಿದ್ದ ಹಿಂದೂ ಸಂಘಟನೆ ಕಾರ್ಯಕಯರ್ತರು

Vinayak Hanamant Gurav
| Updated By: ಸಾಧು ಶ್ರೀನಾಥ್​

Updated on:Aug 15, 2023 | 11:53 AM

Chamrajpet play ground: ವಿವಾದಕ್ಕೀಡಾಗಿರೋ ಬೆಂಗಳೂರಿನ ಚಾಮರಾಜಪೇಟೆ ಆಟದ ಜಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಬ್ಬವನ್ನ ಸರ್ಕಾರ ಕದ್ದು ಮುಚ್ಚಿ ಆಚರಣೆ ಮಾಡ್ತಾ? ಯಾವುದೋ ಒಂದು ಸಮುದಾಯಕ್ಕೆ ಸರ್ಕಾರ ಹೆದರಿತಾ? ಎಂದು ಆಕ್ರೋಶಗೊಂಡ ಚಾಮರಾಜಪೇಟೆ ನಾಗರಿಕರ ಒಕ್ಕೂಟವು ಸರ್ಕಾರ, ಜಿಲ್ಲಾಡಳಿತದ ನಡೆಗೆ ಅಸಮಾಧಾನ ವ್ಯಕ್ತಪಡಿಸಿತು. ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಹೋರಾಟದಿಂದ ಕಳೆದ ಬಾರಿ ಧ್ವಜಾರೋಹಣ ಮಾಡಲಾಗಿತ್ತು. 75 ವರ್ಷದಿಂದ ಸಾಧ್ಯವಾಗದ ಕಾರ್ಯವನ್ನು ಒಕ್ಕೂಟ ಸಾಧ್ಯ ಮಾಡಿತ್ತು. ಸರ್ಕಾರದ ನಡೆಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಬೇಸರ ವ್ಯಕ್ತಪಡಿಸಿದರು.

ಎಲ್ಲೆಡೆಯಂತೆ ಬೆಂಗಳೂರಿನ ಚಾಮರಾಜಪೇಟೆ ಆಟದ ಮೈದಾನದಲ್ಲಿ (chamrajpet play ground) 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ (77th independence day) ಧ್ವಜಾರೋಹಣ ನೆರವೇರಿತು. ಬೆಂಗಳೂರು ಉತ್ತರ ವಿಭಾಗದ ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಅರ್ಜುನ್ ಒಡೆಯರ್‌ರಿಂದ ಧ್ವಜಾರೋಹಣ ನಡೆಯಿತು. ಗಮನಾರ್ಹವೆಂದರೆ ಈ ವೇಳೆ ಸ್ಥಳೀಯ ಶಾಸಕರೂ ಆದ, ಸಚಿವ ಜಮೀರ್ ಅಹ್ಮದ್ (minister zameer ahmed) ಅವರು ಅನುಪಸ್ಥಿತರಾಗಿದ್ದರು (absent). ಧ್ವಜಾರೋಹಣ ಕಾರ್ಯಕ್ರಮಕ್ಕೆ ಬಾರದ ಸಚಿವ ಜಮೀರ್ ಅಹ್ಮದ್ ಮೇಲೆ ಹಿಂದೂ ಸಂಘಟನೆ ಕಾರ್ಯಕಯರ್ತರು ಮುಗಿಬಿದ್ದರು.

ವಿವಾದಕ್ಕೀಡಾಗಿರೋ ಬೆಂಗಳೂರಿನ ಚಾಮರಾಜಪೇಟೆ ಆಟದ ಜಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಬ್ಬವನ್ನ ಸರ್ಕಾರ ಕದ್ದು ಮುಚ್ಚಿ ಆಚರಣೆ ಮಾಡ್ತಾ? ಯಾವುದೋ ಒಂದು ಸಮುದಾಯಕ್ಕೆ ಸರ್ಕಾರ ಹೆದರಿತಾ? ಎಂದು ಆಕ್ರೋಶಗೊಂಡ ಚಾಮರಾಜಪೇಟೆ ನಾಗರಿಕರ ಒಕ್ಕೂಟವು ಸರ್ಕಾರ, ಜಿಲ್ಲಾಡಳಿತದ ನಡೆಗೆ ಅಸಮಾಧಾನ ವ್ಯಕ್ತಪಡಿಸಿತು. ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಹೋರಾಟದಿಂದ ಕಳೆದ ಬಾರಿ ಧ್ವಜಾರೋಹಣ ಮಾಡಲಾಗಿತ್ತು. 75 ವರ್ಷದಿಂದ ಸಾಧ್ಯವಾಗದ ಕಾರ್ಯವನ್ನು ಒಕ್ಕೂಟ ಸಾಧ್ಯ ಮಾಡಿತ್ತು. ಸರ್ಕಾರದ ನಡೆಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಬೇಸರ ವ್ಯಕ್ತಪಡಿಸಿದರು.

ನಮ್ಮ ಹೋರಾಟದ ಫಲವಾಗಿಯೇ ಕಳೆದ ಬಾರಿ ತ್ರಿವರ್ಣಧ್ವಜ ಹಾರಿಸಲಾಗಿತ್ತು. ಇಂದಿನ ಸ್ವತಂತ್ರ ಹಬ್ಬದ ಅಂಗವಾಗಿ ನಮ್ಮ ಒಕ್ಕೂಟಕ್ಕೆ ಅಹ್ವಾನ ನೀಡಿಲ್ಲ. ಯಾರದ್ದೋ ಒಬ್ಬ ಶಾಸಕಗೆ ಹೆದರಿ ಹೀಗೆ ಮಾಡ್ತಿದ್ದಾರೆ ಅಂತ ಆರೋಪ ಮಾಡಿದರು. ನಿಗದಿ ಮಾಡಿದ್ದ ಸಮಯಕ್ಕೂ ಮೊದಲೇ ದ್ವಜಾರೋಹಣ ಮಾಡಿದ್ದಾರೆ. ನಾನು ಪೊಲೀಸರಿಗೆ ಫೋನ್ ಮಾಡಿ ಸಮಯ ತಿಳಿದುಕೊಂಡು ಕಾರ್ಯಕ್ರಮದ ಸ್ಥಳಕ್ಕೆ ಬಂದಿದ್ದೇನೆ. ಇಲ್ಲಿನ ಅವ್ಯವಸ್ಥೆ ಕುರಿತಂತೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ಅವ್ಯವಸ್ಥೆ ಆದ್ರೆ ಒಕ್ಕೂಟದಿಂದ ಉಗ್ರ ಹೋರಾಟ ನಡೆಸುವುದಾಗಿ ರಾಮೇಗೌಡ ಇದೇ ವೇಳೆ ಎಚ್ಚರಿಕೆ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 15, 2023 11:50 AM