AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Independence Day: ಸರ್ಕಾರಿ ಬಸ್​ಗೆ ಅಲಂಕಾರ ಮಾಡಿ ಸ್ಪೆಷಲ್ ಆಗಿ ಸ್ವಾತಂತ್ರ್ಯ ದಿನ ಆಚರಿಸಿದ ಕಲಬುರಗಿ ತಾಂಡಾ ಯುವಕರು

Independence Day: ಸರ್ಕಾರಿ ಬಸ್​ಗೆ ಅಲಂಕಾರ ಮಾಡಿ ಸ್ಪೆಷಲ್ ಆಗಿ ಸ್ವಾತಂತ್ರ್ಯ ದಿನ ಆಚರಿಸಿದ ಕಲಬುರಗಿ ತಾಂಡಾ ಯುವಕರು

ಸಂಜಯ್ಯಾ ಚಿಕ್ಕಮಠ
| Edited By: |

Updated on:Aug 15, 2023 | 1:14 PM

Share

ಕಲಬುರಗಿ ತಾಲೂಕಿನ ಪಾಣೇಗಾಂವ್ ಬಸವನ ತಾಂಡಾದ ಯುವಕರು ವಿಶೇಷವಾಗಿ ಸ್ವತಂತ್ರ ದಿನ ಆಚರಿಸಿದ್ದಾರೆ. ತಮ್ಮೂರಿಗೆ ಬಂದ ಸರ್ಕಾರಿ ಬಸ್​ಗೆ ತಳಿರು ತೋರಣ ಕಟ್ಟಿ, ಬಸ್​ನೊಳಗೆ ಅಲಂಕಾರ ಮಾಡಿ ಬಸ್​ಗೆ ರಾಷ್ಟ್ರ ಧ್ವಜ ಕಟ್ಟಿ ಸಂಭ್ರಮಿಸಿದ್ದಾರೆ. ಬಸ್​ನಲ್ಲಿ ಸ್ವತಂತ್ರ ಹೋರಾಟಗಾರರ ಭಾವಚಿತ್ರಗಳು, ದೇಶಭಕ್ತಿ ಗೀತೆಗಳನ್ನು ಹಾಕಿ ತಾಂಡಾ ಯುವಕರು ಸಂಭ್ರಮಿಸಿದ್ದಾರೆ.

ಕಲಬುರಗಿ, ಆ. 15: ಇಂದು ಇಡೀ ಭಾರತದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ತಿರಂಗ ಹಾರಾಡುತ್ತಿದೆ. ಜನತೆ ದೇಶ ಪ್ರೇಮ ಮೆರೆಯುತ್ತಿದ್ದಾರೆ. ಮತ್ತೊಂದೆಡೆ ಕಲಬುರಗಿ ತಾಲೂಕಿನ ಪಾಣೇಗಾಂವ್ ಬಸವನ ತಾಂಡಾದ ಯುವಕರು ವಿಶೇಷವಾಗಿ ಸ್ವತಂತ್ರ ದಿನ ಆಚರಿಸಿದ್ದಾರೆ. ತಮ್ಮೂರಿಗೆ ಬಂದ ಸರ್ಕಾರಿ ಬಸ್​ಗೆ ತಳಿರು ತೋರಣ ಕಟ್ಟಿ, ಬಸ್​ನೊಳಗೆ ಅಲಂಕಾರ ಮಾಡಿ ಬಸ್​ಗೆ ರಾಷ್ಟ್ರ ಧ್ವಜ ಕಟ್ಟಿ ಸಂಭ್ರಮಿಸಿದ್ದಾರೆ. ಬಸ್​ನಲ್ಲಿ ಸ್ವತಂತ್ರ ಹೋರಾಟಗಾರರ ಭಾವಚಿತ್ರಗಳು, ದೇಶಭಕ್ತಿ ಗೀತೆಗಳನ್ನು ಹಾಕಿ ತಾಂಡಾ ಯುವಕರು ಸಂಭ್ರಮಿಸಿದ್ದಾರೆ.

Published on: Aug 15, 2023 01:13 PM
Follow Us
Sanjayya Chikkamath
Sanjayya Chikkamath

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More