ಮೊದಲ ಬಾರಿಗೆ ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್!
ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಸೈಂಟ್ ಮೇರಿಸ್ ದ್ವೀಪದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ (Republic Day 2026) ನೆರವೇರಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಧ್ವಜಾರೋಹಣ ಮಾಡಿದರು. ಅಧಿಕಾರಿಗಳು ಮತ್ತು ಗಣ್ಯರು ಬೋಟ್ ಮೂಲಕ ದ್ವೀಪಕ್ಕೆ ತೆರಳಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಈ ವಿಶೇಷ ಸಂದರ್ಭದಲ್ಲಿ, ಸಶಸ್ತ್ರ ಪಡೆಗಳ ವತಿಯಿಂದ ರಾಷ್ಟ್ರೀಯ ವಂದನಾ ಪರೇಡ್ ಹಾಗೂ ಸಶಸ್ತ್ರ ಪರೇಡ್ ಜರುಗಿತು. ಇದು ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಮತ್ತು ಗಾಂಭೀರ್ಯದ ಸ್ಪರ್ಶ ನೀಡಿತು. ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ಈ ವಿಶಿಷ್ಟ ಆಚರಣೆಯು 77ನೇ ಗಣರಾಜ್ಯೋತ್ಸವದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಉಡುಪಿ, ಜನವರಿ 26: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಸೈಂಟ್ ಮೇರಿಸ್ ದ್ವೀಪದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ (Republic Day 2026) ನೆರವೇರಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಧ್ವಜಾರೋಹಣ ಮಾಡಿದರು. ಅಧಿಕಾರಿಗಳು ಮತ್ತು ಗಣ್ಯರು ಬೋಟ್ ಮೂಲಕ ದ್ವೀಪಕ್ಕೆ ತೆರಳಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಈ ವಿಶೇಷ ಸಂದರ್ಭದಲ್ಲಿ, ಸಶಸ್ತ್ರ ಪಡೆಗಳ ವತಿಯಿಂದ ರಾಷ್ಟ್ರೀಯ ವಂದನಾ ಪರೇಡ್ ಹಾಗೂ ಸಶಸ್ತ್ರ ಪರೇಡ್ ಜರುಗಿತು. ಇದು ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಮತ್ತು ಗಾಂಭೀರ್ಯದ ಸ್ಪರ್ಶ ನೀಡಿತು. ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ಈ ವಿಶಿಷ್ಟ ಆಚರಣೆಯು 77ನೇ ಗಣರಾಜ್ಯೋತ್ಸವದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
