ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!

Updated on: Sep 21, 2026 | 10:01 PM

ಕೊಪ್ಪಳ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಮನೆಯ ಹೊರಗೆ ನಿಂತಿದ್ದ 91 ವರ್ಷದ ವೃದ್ಧೆಯೊಬ್ಬರ ಮೇಲೆ ಕೋತಿ ಹಾರಿ, ಅವರನ್ನು ತಳ್ಳಿದ ಪರಿಣಾಮವಾಗಿ ಆಕೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆ ವೃದ್ಧೆಯ ತಲೆಗೆ ತೀವ್ರ ಗಾಯವಾಗಿ ಮೃತಪಟ್ಟಿದ್ದಾರೆ. ಶನಿವಾರ ಸಂಜೆ ಈ ಘಟನೆ ಸಂಭವಿಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. 91 ವರ್ಷದ ನಜ್ಮುನ್ನಿಸಾ ಬೇಗಂ ಮನೆಯ ಹೊರಗೆ ಅಂಗಳದಲ್ಲಿ ನಿಂತಿದ್ದಾಗ ಮನೆಯ ಮೇಲಿಂದ ಹಾರಿ ಬಂದ ಕೋತಿ ಆ ವೃದ್ಧೆಯ ಮೇಲೆ ದಾಳಿ ನಡೆಸಿದೆ. ಆ ಕೋತಿ ಹತ್ತಿರ ಬರುತ್ತಿದ್ದಂತೆ ಮನೆಯೊಳಗೆ ಹೋಗಲು ಯತ್ನಿಸಿದ ವೃದ್ಧೆಯನ್ನು ತಳ್ಳಿದ ಕೋತಿ ಓಡಿಹೋಗಿದೆ. ಇದರಿಂದ ಕೆಳಗೆ ಬಿದ್ದ ಆ ವೃದ್ಧೆಯ ತಲೆಗೆ ಗಾಯವಾಗಿತ್ತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾರೆ.

ಕೊಪ್ಪಳ, ಸೆಪ್ಟೆಂಬರ್ 21: ಕೊಪ್ಪಳ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಕೋತಿಯ ಕಪಿಚೇಷ್ಟೆಯಿಂದಾಗಿ ಅಜ್ಜಿಯೊಬ್ಬರ ಜೀವವೇ ಹೋಗಿದೆ. ಮನೆಯ ಮೇಲೆ ಮಂಗಗಳ ಶಬ್ದ ಕೇಳಿದ್ದರಿಂದ ಏನಾಯಿತೆಂದು ನೋಡಲು ಹೊರಗೆ ಬಂದು ನಿಂತಿದ್ದ 91 ವರ್ಷದ ವೃದ್ಧೆಯೊಬ್ಬರ ಮೇಲೆ ಕೋತಿ ಹಾರಿ, ಅವರನ್ನು ತಳ್ಳಿದೆ. ಇದರಿಂದ ಆಕೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆ ವೃದ್ಧೆಯ ತಲೆಗೆ ತೀವ್ರ ಗಾಯವಾಗಿ ಮೃತಪಟ್ಟಿದ್ದಾರೆ. ಶನಿವಾರ ಸಂಜೆ ಈ ಘಟನೆ ಸಂಭವಿಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. 91 ವರ್ಷದ ನಜ್ಮುನ್ನಿಸಾ ಬೇಗಂ ಮನೆಯ ಹೊರಗೆ ಅಂಗಳದಲ್ಲಿ ನಿಂತಿದ್ದಾಗ ಮನೆಯ ಮೇಲಿಂದ ಹಾರಿ ಬಂದ ಕೋತಿ ಆ ವೃದ್ಧೆಯ ಮೇಲೆ ದಾಳಿ ನಡೆಸಿದೆ. ಆ ಕೋತಿ ಹತ್ತಿರ ಬರುತ್ತಿದ್ದಂತೆ ಮನೆಯೊಳಗೆ ಹೋಗಲು ಯತ್ನಿಸಿದ ವೃದ್ಧೆಯನ್ನು ತಳ್ಳಿದ ಕೋತಿ ಓಡಿಹೋಗಿದೆ. ಇದರಿಂದ ಕೆಳಗೆ ಬಿದ್ದ ಆ ವೃದ್ಧೆಯ ತಲೆಗೆ ಗಾಯವಾಗಿತ್ತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾರೆ.

 

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More