ಲಾರಿ ಅಡಿಗೆ ಸಿಕ್ಕ 12-ವರ್ಷದ ಬಾಲಕ ಆಚೆ ಬರಲು ತೋರಿದ ಅಪ್ರತಿಮ ಧೈರ್ಯ ಮೆಚ್ಚಲೇಬೇಕು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 06, 2022 | 7:51 PM

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಲಾರಿ ಅಡಿಯಿಂದ ಅವನಿಗೆ ಹೊರಬರಲು ಸಾಧ್ಯವಾಗಿಲ್ಲ. ಟ್ರಕ್ಕಿನ ಚಾಲಕ ಮತ್ತು ಸ್ಥಳೀಯರು ಅವನನ್ನು ಹೊರಗೆಳೆಯಲು ಹರಸಾಹಸಪಟ್ಟರೂ ಅದು ಸಾಧ್ಯವಾಗದೆ ಹೋಗಿದೆ.

Belagavi:  ಈ 12-ವರ್ಷ-ವಯಸ್ಸಿನ ಬಾಲಕನ ಧೈರ್ಯವನ್ನು ಮೆಚ್ಚಲೇ ಬೇಕು ಮಾರಾಯ್ರೇ. ಅವನ ಹೆಸರು ಪ್ರಕಾಶ್ ಸಾಳುಂಕೆ (Prakash Salunke). ಸೋಮವಾರ ಬೆಳಗ್ಗೆ ಅವನು ಸಾವಿನ ದವಡೆಯಿಂದ ಪವಾಡಸದೃಶ (providential) ರೀತಿಯಲ್ಲಿ ಪಾರಾದ ಅನ್ನುವುದಕ್ಕಿಂತ ಅವನು ತೋರಿದ ಅಪ್ರತಿಮ ಧೈರ್ಯವೇ (bravery) ಅವನನ್ನು ಉಳಿಸಿತು ಅಂದರೆ ಉತ್ಪ್ರೇಕ್ಷೆ ಅನಿಸದು. ಪ್ರಕಾಶ್ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಗಿರಿಗಾಂವ್ ಗ್ರಾಮದವನು. ಈ ಭಾಗದಲ್ಲಿ ಸೋಮವಾರ ಸೋನೆ ಮಳೆ ಶುರುವಾಗಿದೆ. ಲಾರಿಯೊಂದು ಮಳೆಯಿಂದಾಗಿ ರಾಡಿಯಂತಾಗಿದ್ದ ರಸ್ತೆಯಲ್ಲಿ ಹೋಗುವಾಗ ಅದು ಪಕ್ಕಕ್ಕೆ ಜಾರಿ ಬಿಟ್ಟಿದೆ.

ಪ್ರಕಾಶ್ ಎಲ್ಲಿದ್ದ ಮತ್ತು ಅವನು ಅದು ಹೇಗೆ ಲಾರಿ ಅಡಿಗೆ ಬಂದ ಅನ್ನೋದು ನಮಗೆ ಗೊತ್ತಾಗಿಲ್ಲ ಮಾರಾಯ್ರೇ. ಅವನು ಚಕ್ರದಡಿಗೆ ಹೋಗಿದ್ದಾನದರೂ ಲಾರಿ ಅವನ ಮೇಲೆ ಹತ್ತಿಲ್ಲ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಲಾರಿ ಅಡಿಯಿಂದ ಅವನಿಗೆ ಹೊರಬರಲು ಸಾಧ್ಯವಾಗಿಲ್ಲ. ಟ್ರಕ್ಕಿನ ಚಾಲಕ ಮತ್ತು ಸ್ಥಳೀಯರು ಅವನನ್ನು ಹೊರಗೆಳೆಯಲು ಹರಸಾಹಸಪಟ್ಟರೂ ಅದು ಸಾಧ್ಯವಾಗದೆ ಹೋಗಿದೆ.

ಆದರೆ ಈ ಸಂದರ್ಭದಲ್ಲಿ ಪ್ರಕಾಶ್ ಮಾತ್ರ ಹೆದರಿಲ್ಲ, ಧೃತಿಗೆಟ್ಟಿಲ್ಲ. ಕೊನೆಗೆ ಊರ ಜನ ಜೆಸಿಬಿಯನ್ನು ಸ್ಥಳಕ್ಕೆ ಕರೆಸಿದ್ದಾರೆ. ಈ ಭಾರಿ ಯಂತ್ರ ಲಾರಿಯನ್ನು ಕೊಂಚ ಮೇಲಕ್ಕೆ ಎತ್ತಿದ ಬಳಿಕ ಪ್ರಕಾಶ್ ಸಾಳುಂಕೆ ಆಚೆ ಬಂದಿದ್ದಾನೆ. ಲಾರಿಯ ಚಾಲಕ ಮತ್ತು ಅಲ್ಲಿ ನೆರೆದಿದ್ದ ಜನ ಅವನ ಧೈರ್ಯ ಕಂಡು ದಂಗಾಗಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published on: Jun 06, 2022 07:49 PM