ತಂದೆ ತಾಯಿಗೆ ಬೆದರಿಕೆ: ಹೆತ್ತವರ ಪ್ರಾಣ ರಕ್ಷಣೆಗೆ ಓದುವುದನ್ನೇ ಬಿಟ್ಟು ಊರಿಗೆ ಬಂದವನನ್ನೇ ಬಲಿ ಪಡೆದ್ರು
ಆಸ್ತಿ ವಿಚಾರಕ್ಕೆ ಸಂಭಂದಿಗಳ ಮಧ್ಯೆ ನಡೆದ ಜಗಳದಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಸಾವನ್ನಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಲಿಂಗಾಪುತ ಗ್ರಾಮದಲ್ಲಿ ಘಟನೆ ನಡೆದಿದ್ದು, ವಿಶ್ವನಾಥ ಮರೆಮ್ಮನವರ (26) . ಹೌದು, ಘಟನೆಯಲ್ಲಿ ಕೊಲೆಯಾದ ಯುವಕ. ಇನ್ನು ವಿಶ್ವನಾಥನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಅಕ್ಕ ಡಾಕ್ಟರ್ ಆಗಿದ್ದರೂ ಸಹ ತಮ್ಮ ಪ್ರಾಣ ಉಳಿಸಿಕೊಳ್ಳಲಾಗಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಬಾಗಲಕೋಟೆ, (ಅಕ್ಟೋಬರ್ 20): ಅವರಿಬ್ಬರೂ ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು, ಅಕ್ಕ ತಮ್ಮ ಬೆಳೆಯುತ್ತಾ ಮದುವೆಯಾಗಿ, ಅವರಿಗೆ ಮಕ್ಕಳಾಗಿ ವಯಸ್ಸಾಗಿದ್ರೂ ಅವರಿಬ್ಬರ ಮಧ್ಯೆ ಆಸ್ತಿ ಸಂಬಂಧ ಜಗಳ ಮಾತ್ರ ಮುಗಿದಿರಲಿಲ್ಲ, ತವರುಮನೆ ಆಸ್ತಿಗಾಗಿ ಮೇಲಿಂದ ಮೇಲೆ ಅಕ್ಕ ಜಗಳ ಶುರು ಮಾಡಿದ್ದಳು, ಈ ಅಕ್ಕ ತಮ್ಮನ ಕುಟುಂಬಸ್ಥರ ಮಧ್ಯೆ ಆಸ್ತಿಗಾಗಿ ನಡೆದ ಗಲಾಟೆ ತಮ್ಮನ ಮಗನ ಜೀವವನ್ನೇ ಬಲಿ ಪಡೆದಿದೆ. ಹೌದು…. ಆಸ್ತಿ ವಿಚಾರಕ್ಕೆ ಸಂಭಂದಿಗಳ ಮಧ್ಯೆ ನಡೆದ ಜಗಳದಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಸಾವನ್ನಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಲಿಂಗಾಪುತ ಗ್ರಾಮದಲ್ಲಿ ಘಟನೆ ನಡೆದಿದ್ದು, ವಿಶ್ವನಾಥ ಮರೆಮ್ಮನವರ (26) . ಹೌದು, ಘಟನೆಯಲ್ಲಿ ಕೊಲೆಯಾದ ಯುವಕ. ಇನ್ನು ವಿಶ್ವನಾಥನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಅಕ್ಕ ಡಾಕ್ಟರ್ ಆಗಿದ್ದರೂ ಸಹ ತಮ್ಮ ಪ್ರಾಣ ಉಳಿಸಿಕೊಳ್ಳಲಾಗಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
