ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 27, 2024 | 4:53 PM

ಹಾವುಗಳು ಸ್ವಲ್ಪ ಜಾಗ ಸಿಕ್ಕರೆ ಸಾಕು ಎಲ್ಲೆಂದರಲ್ಲಿ ಸೇರಿಕೊಂಡು ಬಿಡುತ್ತದೆ. ಇದೀಗ ಮಂಗಳೂರು ನಗರಕ್ಕೆ ಎಂಟ್ರಿ ಕೊಟ್ಟ ಹೆಬ್ಬಾವು ಮರಿಯೊಂದು ನಗರದ ಕೊಡಿಯಾಲ್ ಬೈಲ್ ಬಳಿ ಇರುವ ಯೂನಿಯನ್ ಬ್ಯಾಂಕ್​ನ ಎಸಿ ಯೊಳಗಡೆ ಸೇರಿಕೊಂಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಗಂಗೇಶ್ ಬೋಳಾರ್ ಅವರು, ಎಸಿ ಪ್ಯಾನಲ್‌ ಒಳಗಿದ್ದ ಹೆಬ್ಬಾವು ಮರಿಯನ್ನ ಹೊರಗೆ ತೆಗೆದು ರಕ್ಷಿಸಿದ್ದಾರೆ.

ದಕ್ಷಿಣ ಕನ್ನಡ, ಜೂ.27: ಮಳೆ ಹಿನ್ನಲೆ ಮಂಗಳೂರು ನಗರದ ಕೊಡಿಯಾಲ್ ಬೈಲ್ ಬಳಿ ಇರುವ ಯೂನಿಯನ್ ಬ್ಯಾಂಕ್​ನ ಎಸಿ ಯೊಳಗಡೆ ಹೆಬ್ಬಾವು ಮರಿ(baby python) ಸೇರಿಕೊಂಡ ಘಟನೆ ಬೆಳಕಿಗೆ ಬಂದಿದೆ. ಇನ್ನು ಹೆಬ್ಬಾವಿನ ಮರಿಯನ್ನ ನೋಡುತ್ತಿದ್ದಂತೆ ಕಂಗಾಲಾದ ಬ್ಯಾಂಕ್​ ಸಿಬ್ಬಂದಿ, ಸ್ಥಳೀಯ ಉರಗ ತಜ್ಞ ಗಂಗೇಶ್ ಬೋಳಾರ್ ಅವರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅವರು, ಎಸಿ ಪ್ಯಾನಲ್‌ ಒಳಗಿದ್ದ ಹೆಬ್ಬಾವು ಮರಿಯನ್ನ ಹೊರಗೆ ತೆಗೆದು ರಕ್ಷಿಸಿದ್ದಾರೆ. ಬಳಿಕ  ಬ್ಯಾಂಕ್​ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಈ ಹೆಬ್ಬಾವು‌ ಮರಿ ಎಸಿ ಔಟ್ ಡೋರ್​​ನ ಕೇಬಲ್ ಮೂಲಕ ಒಳ ಬಂದಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಉರಗ ತಜ್ಞ ಗಂಗೇಶ್ ಹೇಳುವಂತೆ ಇದಕ್ಕೆ 180 ಹಲ್ಲುಗಳಿದ್ದು, ಇದು ಕಚ್ಚುತ್ತದೆ. ಆದರೆ, ಇದರಲ್ಲಿ ಯಾವುದೇ ವಿಷ ಇರುವುದಿಲ್ಲವಂತೆ. ಒಟ್ಟಿನಲ್ಲಿ ಮಂಗಳೂರಿನ ಬ್ಯಾಂಕ್​ಗೆ ಎಂಟ್ರಿ ಕೊಟ್ಟಿದ್ದ ಮರಿ ಹೆಬ್ಬಾವನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on