ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು

ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು

ಮಂಜುನಾಥ ಸಿ.
|

Updated on: Jun 27, 2024 | 4:59 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರನ್ನು ಕಾಣಲು ಅಭಿಮಾನಿಗಳು ಜೈಲಿನ ಬಳಿ ಬರುವುದು ಸಾಮಾನ್ಯವಾಗಿದೆ. ಇಂದು ವಿಶೇಷ ಚೇತನ ಅಭಿಮಾನಿಯೊಬ್ಬರು ದರ್ಶನ್ ಅನ್ನು ಭೇಟಿಯಾಗಲು ಬಂದಿದ್ದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಕಾಲ ಕಳೆಯುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ದರ್ಶನ್​ ಸಹ ಒಬ್ಬರಾಗಿದ್ದು, ಪ್ರತಿದಿನ ದರ್ಶನ್ ಅನ್ನು ಕಾಣಲು ದೂರ-ದೂರದಿಂದ ಅಭಿಮಾನಿಗಳು ಜೈಲಿನ ಬಳಿಗೆ ಬರುತ್ತಿದ್ದಾರೆ. ಇಂದು (ಜೂನ್ 27) ವಿಶೇಷ ಚೇತನ ಅಭಿಮಾನಿಯೊಬ್ಬರು ದರ್ಶನ್ ಅನ್ನು ಕಾಣಲು ಬಂದಿದ್ದರು. ದರ್ಶನ್ ಅನ್ನು ಭೇಟಿಯಾಗದೆ ಊಟ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದರು. ಮಾಧ್ಯಮಗಳೊಟ್ಟಿಗೆ ಮಾತನಾಡಿ ತಮಗೆ ದರ್ಶನ್ ಮೇಲಿರುವ ಅಭಿಮಾನದ ಬಗ್ಗೆ ಮಾತನಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ