ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ನಿನ್ನೆ ತಮ್ಮ ಪಕ್ಷದ ಎಮ್ಮೆಲ್ಸಿಯಾಗಿರುವ ಹೆಚ್ ವಿಶ್ವನಾಥ ಅವರು ಆರ್ ಅಶೋಕ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಆಶೋಕ ಯಾವುದಕ್ಕೂ ಉತ್ತರಿಸಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಶಿವಕುಮಾರ್ ವಿರುದ್ಧ ಸ್ಪರ್ಧಿಸಿದ್ದ ಅಶೋಕ ಠೇವಣಿ ಕಳೆದುಕೊಂಡಿದ್ದರು. ಆದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶ್ ಸೋತಿದ್ದನ್ನು ದೊಡ್ಡ ಅವಮಾನವೆಂಬಂತೆ ಚಿತ್ರಿಸುತ್ತಾರೆ. ಶಿವಕುಮಾರ್ ಮತ್ತು ಸುರೇಶ್ ಇಬ್ಬರು ಕ್ರೀಡಾಮನೋಭಾವದಿಂದ ಸೋಲು ಅಂಗೀಕರಿಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಕಳೆದ ಒಂದು ವಾರದಿಂದ ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿದ್ದೇನೆ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳ ನಡುವೆ ತೀವ್ರಸ್ವರೂಪದ ಹೋರಾಟ ನಡೆಯುತ್ತಿದೆ. ಮೂರು ಡಿಸಿಎಂಗಳು ಬೇಕೆಂದು ಸಿದ್ದರಾಮಯ್ಯನವರು ಹೂಡಿದ ತಂತ್ರಕ್ಕೆ ಶಿವಕುಮಾರ್ ಸ್ವಾಮೀಜಿ ಮೂಲಕ ಹೇಳಿಕೆ ನೀಡಿಸುವ ಮೂಲಕ ಪ್ರತಿತಂತ್ರ ಹೂಡಿದ್ದಾರೆ ಎಂದು ಅಶೋಕ ಹೇಳಿದರು. ಅವರು ಇಷ್ಟು ಹೇಳಿ ನಿಲ್ಲಿಸಿದ್ದರೆ ಅದು ಸರಿಯೆನಿಸುತಿತ್ತು. ಆದರೆ ಮುಂದುವರಿದು ಮಾತಾಡುವ ಅವರು, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮನಸ್ಸಿನಲ್ಲಿ ಏನೆಲ್ಲ ನಡೆಯುತ್ತಿದೆ ಅನ್ನೋದನ್ನು ತಿಳಿದುಕೊಂಡವರ ಹಾಗೆ ಮಾತಾಡುತ್ತಾರೆ. ಡಿಕೆ ಸುರೇಶ್ ಸೋಲನ್ನು ಶಿವಕುಮಾರ್ ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ, ಹಾಗಾಗೇ. ಸಿದ್ದರಾಮಯ್ಯರಿಂದ ಸಿಎಂ ಪಟ್ಟ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಅನ್ನುತ್ತಾರೆ.
ನಂತರ ಅವರು ಸ್ವಾಮೀಜಿ ಮಾತುಗಳಿಂದ ಸಿದ್ದರಾಮಯ್ಯನವರಿಗೆ ತೀರ ಆವಮಾನವಾಗಿದೆ, ಅವರು ಧರ್ಮಾತ್ಮರಾಗಿದ್ದರೆ ಸಿಎಂ ಸೀಟಿನ ಮೇಲೆ ಒಂದು ನಿಮಿಷವೂ ಕೂತುಕೊಳ್ಳದೆ ರಾಜೀನಾಮೆ ಸಲ್ಲಿಸಿ ಬೇರೆಯವರಿಗೆ ಸ್ಥಾನ ಬಿಟ್ಟುಕೊಡಬೇಕು ಅನ್ನುತ್ತಾರೆ. ಅಲ್ಲಾ ಸ್ವಾಮಿ, ಶ್ರೀಗಳು ಏನು ಹೇಳಿದ್ದಾರೆ ಅಂತ ಸಿದ್ದರಾಮಯ್ಯಗೆ ಅವಮಾನವಾಗುತ್ತದೆ? ನಮ್ಮ ರಾಜ್ಯದಲ್ಲಿ, ದೇಶದಲ್ಲಿ ಶ್ರೀಗಳು ಹೇಳುವುದನ್ನು ಯಾರೂ ಅವಮಾನ ಅಂತ ಭಾವಿಸಲ್ಲ, ನೀವ್ಯಾಕೆ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿರುವಿರಿ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಮತದಾರರ ಮೇಲಿನ ಕೋಪಕ್ಕೆ ಡಿಕೆ ಸಹೋದರರ ಗೂಂಡಾಗಿರಿ: ಆರ್ ಅಶೋಕ ಕಿಡಿ