ಗಾಂಜಾ ಮಾರಾಟಗಾರನೆಂಬ ಶಂಕೆಗೊಳಗಾಗಿದ್ದ ಭಿಕ್ಷುಕನ ಬಳಿ ಸಿಕ್ಕಿದ್ದು ಭಿಕ್ಷೆಯಿಂದ ಸಂಗ್ರಹವಾಗಿದ್ದ ಸುಮಾರು ರೂ. 50,000 ಹಣ!

ಗಾಂಜಾ ಮಾರಾಟಗಾರನೆಂಬ ಶಂಕೆಗೊಳಗಾಗಿದ್ದ ಭಿಕ್ಷುಕನ ಬಳಿ ಸಿಕ್ಕಿದ್ದು ಭಿಕ್ಷೆಯಿಂದ ಸಂಗ್ರಹವಾಗಿದ್ದ ಸುಮಾರು ರೂ. 50,000 ಹಣ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 18, 2023 | 7:02 PM

ಕೊರಟಗೆರೆ ತಾಲ್ಲೂಕಿನ ಹೊಸಹಳ್ಳಿ ಗ್ರಾಮದವನಾಗಿರುವ ಗುರುಸಿದ್ದಪ್ಪ ಸುಮಾರು 10 ವರ್ಷಗಳ ಹಿಂದೆ ಯಾವುದೋ ಕಾರಣಕ್ಕೆ ಹೆಂಡತಿ ಜೊತೆ ಜಗಳ ಮಾಡಿ ಮನೆಬಿಟ್ಟು ಹೊರಬಂದವನು ಕೊರಟಗೆರೆ, ತುಮಕೂರು, ಗುಬ್ಬಿ ಮೊದಲಾದ ಕಡೆ ಭಿಕ್ಷೆ ಬೇಡಿಕೊಂಡು ಬದುಕು ಕಳೆಯುತ್ತಿದ್ದ.

ತುಮಕೂರು: ನೋಟು ಹಾಗೂ ಅಪಾರ ಪ್ರಮಾಣದ ನಾಣ್ಯಗಳೊಂದಿಗೆ ವಿಡಿಯೋದಲ್ಲಿ ಕಾಣಿಸುವ ಬಿಳಿತಲೆ ಹಾಗೂ ಬಿಳಿ ಗಡ್ಡಮೀಸೆಯ ವಯಸ್ಕ ವ್ಯಕ್ತಿ (elderly person) ಹೆಸರು ಗುರುಸಿದ್ದಪ್ಪ (Gurusiddappa). ಅಸಲಿಗೆ ಕೊರಟಗೆರೆ ತಾಲ್ಲೂಕಿನ ಹೊಸಹಳ್ಳಿ ಗ್ರಾಮದವನಾಗಿರುವ ಗುರುಸಿದ್ದಪ್ಪ ಸುಮಾರು 10 ವರ್ಷಗಳ ಹಿಂದೆ ಯಾವುದೋ ಕಾರಣಕ್ಕೆ ಹೆಂಡತಿ ಜೊತೆ ಜಗಳ ಮಾಡಿ ಮನೆಬಿಟ್ಟು ಹೊರಬಂದವನು ಕೊರಟಗೆರೆ (Koratagere), ತುಮಕೂರು, ಗುಬ್ಬಿ ಮೊದಲಾದ ಕಡೆ ಭಿಕ್ಷೆ ಬೇಡಿಕೊಂಡು ಬದುಕು ಕಳೆಯುತ್ತಿದ್ದ. ಆದರೆ ಕೊರಟಗೆರೆಯ ಕೆಲ ಜನಕ್ಕೆ ಗುರುಸಿದ್ದಪ್ಪ ಗಾಂಜಾ ಮಾರಾಟ ಮಾಡುವ ಶಂಕೆ ಮೂಡಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಅವನನ್ನು ಹಿಡಿದು ತಪಾಸಣೆ ನಡೆಸಿದಾಗ ಅವನ ಬಳಿ ಗಾಂಜಾವೇನೂ ಪತ್ತೆಯಾಗಿಲ್ಲ ಆದರೆ ಭಿಕ್ಷೆಯ ಮೂಲಕ ಸಂಗ್ರಹಿಸಿದ್ದ ರೂ 50,000 ದಷ್ಟು ಹಣ ಸಿಕ್ಕಿದೆ. ವಿಚಾರಣೆ ನಡೆಸಿದಾಗ ಗುರುಸಿದ್ದಪ್ಪ ತನ್ನ ಹಿನ್ನೆಲೆಯ ಬಗ್ಗೆ ಹೇಳಿದ್ದಾನೆ. ಪೊಲೀಸರು ಅವನ ಹೆಂಡತಿಯನ್ನು ಕರೆಸಿ ಜೊತೆ ಮಾಡಿ, ಮತ್ತೇ ಜಗಳ ಮಾಡದಂತೆ ಬುದ್ಧಿವಾದ ಹೇಳಿ ಅವನ ಗಳಿಸಿದ್ದ ಹಣದೊಂದಿಗೆ ಹೊಸಹಳ್ಳಿಗೆ ಕಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ