ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಗನ್​ ಹಿಡಿದು ಸದಸ್ಯನಿಂದ ಬೆದರಿಕೆ; ವಿಡಿಯೋ ವೈರಲ್​

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಗನ್​ ಹಿಡಿದು ಸದಸ್ಯನಿಂದ ಬೆದರಿಕೆ; ವಿಡಿಯೋ ವೈರಲ್​

ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 18, 2023 | 5:31 PM

ಪರವಾನಿಗೆ ಹೊಂದಿದ ಪಿಸ್ತೂಲ್ ಸಹಿತ ಗ್ರಾಮಪಂಚಾಯತಿಗೆ ಆಗಮಿಸಿದ್ದ ಗ್ರಾಮ ಪಂಚಾಯತಿ ಸದಸ್ಯ ಜಾಕೀರ್ ಮನಿಯಾರ್ ಎಂಬಾತ ಪಿಡಿಓ (PDO) ಗೆ ವಿಶ್ವನಾಥ್​ ರಾಠೋಡ್​ಗೆ  ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಕುರಿತು ಬೆದರಿಕೆ ಹಾಕಿದ ವಿಡಿಯೋ ವೈರಲ್​ ಆಗಿದೆ.

ವಿಜಯಪುರ, ಅ.18: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸದಸ್ಯನೇ ಬೆದರಿಕೆ ಹಾಕಿದ ಘಟನೆ ವಿಜಯಪುರ (Vijayapur) ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಪರವಾನಿಗೆ ಹೊಂದಿದ ಪಿಸ್ತೂಲ್ ಸಹಿತ ಗ್ರಾಮಪಂಚಾಯತಿಗೆ ಆಗಮಿಸಿದ್ದ ಗ್ರಾಮ ಪಂಚಾಯತಿ ಸದಸ್ಯ ಜಾಕೀರ್ ಮನಿಯಾರ್ ಎಂಬಾತ ಪಿಡಿಓ (PDO) ಗೆ ವಿಶ್ವನಾಥ್​ ರಾಠೋಡ್​ಗೆ  ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಹಣಕಾಸಿನ ವಿಚಾರದಲ್ಲಿ ಗಲಾಟೆ ಮಾಡಿ ಬೆದರಿಕೆ ಹಾಕಲಾಗಿದ್ದು, ಸದಸ್ಯ ಜಾಕೀರ್ ಮನಿಯಾರ್ ಬೆದರಿಕೆವೊಡ್ಡಿದ ವಿಡಿಯೋ ವೈರಲ್​ ಆಗಿದೆ. ಇನ್ನು ಈ ಘಟನೆ ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ