ಚಿಕ್ಕಬಳ್ಳಾಪುರ: ಟ್ರಕ್ಕಿಂಗ್ ವೇಳೆ ದುರ್ಗಮ ಪ್ರದೇಶಕ್ಕೆ ಜಾರಿ‌ ಬಿದ್ದ ಯುವಕ; ಪ್ರಾಣ ರಕ್ಷಣೆಗೆ ಮೊರೆ

ಚಿಕ್ಕಬಳ್ಳಾಪುರ: ಟ್ರಕ್ಕಿಂಗ್ ವೇಳೆ ದುರ್ಗಮ ಪ್ರದೇಶಕ್ಕೆ ಜಾರಿ‌ ಬಿದ್ದ ಯುವಕ; ಪ್ರಾಣ ರಕ್ಷಣೆಗೆ ಮೊರೆ

TV9 Web
| Updated By: shivaprasad.hs

Updated on: Feb 20, 2022 | 5:45 PM

ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದ ತಪ್ಪಲಿನಲ್ಲಿ ಟ್ರಕ್ಕಿಂಗ್‌ ವೇಳೆ ಬೆಟ್ಟದಿಂದ ಯುವಕನೊಬ್ಬ ಜಾರಿ ಬಿದ್ದ ಘಟನೆ ಸಂಭವಿಸಿದೆ. ಯುವಕ ದುರ್ಗಮ ಪ್ರದೇಶದಲ್ಲಿ ಜಾರಿ ಬಿದ್ದಿರೋದ್ರಿಂದ ಆತ ರಕ್ಷಣಾ ಕಾರ್ಯಚರಣೆಗೆ ತೊಂದರೆಯಾಗಿದೆ.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದ (Nandi Hill) ತಪ್ಪಲಿನಲ್ಲಿ ಟ್ರಕ್ಕಿಂಗ್‌ ವೇಳೆ ಬೆಟ್ಟದಿಂದ ಯುವಕನೊಬ್ಬ ಜಾರಿ ಬಿದ್ದ ಘಟನೆ ಸಂಭವಿಸಿದೆ. ಯುವಕ ದುರ್ಗಮ ಪ್ರದೇಶದಲ್ಲಿ ಜಾರಿ ಬಿದ್ದಿರೋದ್ರಿಂದ ಆತ ರಕ್ಷಣಾ ಕಾರ್ಯಚರಣೆಗೆ ಭಾರೀ ತೊಂದರೆಯಾಗಿದೆ. ಯುವಕ ನಿಶಾಂತ್ ಗುಲ್ಲಾ (19) ಪ್ರಾಣ ರಕ್ಷಣೆಗೆ ಮೊರೆ ಇಡುತ್ತಿದ್ದಾನೆ. ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ತಕ್ಷಣ ಏರ್ ಕ್ರಾಪ್ಟ್ ವ್ಯವಸ್ಥೆ ಮಾಡುವಂತೆ ಯುವಕನ ಸಂಬಂಧಿಗಳಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದೀಗ ಎಸ್​​ಡಿಆರ್​ಎಫ್ ತಂಡ ಸ್ಥಳಕ್ಕೆ ಆಗಮಿಸಿದ್ದು ಹೆಲಿಕಾಪ್ಟರ್ ಹಾಗೂ ಪ್ಯಾರಾಚೂಟ್​ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:

ಮದುವೆಗೆ ಮೂರು ದಿನ ಇರುವಾಗ ಯುವತಿಯ ಅಪಹರಣ, ಅತ್ಯಾಚಾರ; ಬಿಜೆಪಿ ಮುಖಂಡ ಸೇರಿ ಇಬ್ಬರ ವಿರುದ್ಧ ಕೇಸ್​ ದಾಖಲು

Russia Ukraine: ಉಕ್ರೇನ್​ನಿಂದ ಹೊರ ಬರುವಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ