Karnataka Assembly Polls: ಪ್ರಾಮಾಣಿಕ ಮತ್ತು ಸರಳ ರಾಜಕಾರಣಿ ವೈಎಸ್ ವಿ ದತ್ತಾಗೂ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಮುಖ್ಯವಾಯಿತೇ?

|

Updated on: Apr 13, 2023 | 6:03 PM

ಇದರಿಂದ ಬೇಸತ್ತ ಅನ್ನುವುದಕ್ಕಿಂತ ಕಂಗೆಟ್ಟ ದತ್ತಾ ವಾಪಸ್ಸು ಜೆಡಿಎಸ್ ಕದತಟ್ಟಿದ್ದಾರೆ. ನಾಯಕರ ಭಯಂಕರ ಕೊರತೆ ಅನುಭವಿಸುತ್ತಿರುವ ಜೆಡಿಎಸ್ ಅವರನ್ನು ಬರಮಾಡಿಕೊಂಡಿದೆ

ಚಿಕ್ಕಮಗಳೂರು: ವೈಎಸ್ ವಿ ದತ್ತಾ (YSV Datta) ನಿಸ್ಸಂದೇಹವಾಗಿ ಒಬ್ಬ ನೇರ, ಪ್ರಾಮಾಣಿಕ ಮತ್ತು ಡೌನ್ ಟು ಅರ್ಥ್ (down to earth) ರಾಜಕಾರಣಿ. ಆದರೆ ಅವರ ಇತ್ತೀಚಿನ ರಾಜಕೀಯ ನಡೆಗಳು ಕನ್ನಡಿಗರನ್ನು ಗೊಂದಲಕ್ಕೆ ದೂಡಿವೆ. ಅವರು ಜೆಡಿಎಸ್ ಪಕ್ಷದಿಂದ ಹೊರಬಂದು ಯಾಕೆ ಕಾಂಗ್ರೆಸ್ (Congress) ಸೇರಿದರೋ ಅಂತ ಗೊತ್ತಿಲ್ಲ. ಓಕೆ ಪಕ್ಷಾಂತರ ರಾಜಕಾರಣದಲ್ಲಿ ಸಾಮಾನ್ಯ, ಅದೇನೂ ದೊಡ್ಡ ವಿಷಯವಲ್ಲ. ಆದರೆ ಚುನಾವಣೆ ಹತ್ತಿರ ಬಂದಾಗ ಪಕ್ಷ ಬದಲಿಸುವ ನಾಯಕರ ನಿಯತ್ತು ನಿಜಕ್ಕೂ ಪ್ರಶ್ನಾರ್ಹ. ತಾವಿದ್ದ ಪಕ್ಷದಲ್ಲಿ ಟಿಕೆಟ್ ಸಿಗಲಾರದು ಅಂತ ಗೊತ್ತಾಗುತ್ತಿದ್ದಂತೆಯೇ ಅವರು ಬೇರೆ ಪಕ್ಷದ ನಾಯಕರೊಂದಿಗೆ ಮಾತಾಡಿ ಟಿಕೆಟ್ ಕೊಡಿಸುವುದಾದರೆ ನಿಮ್ಮಲ್ಲಿಗೆ ಬರುತ್ತೇನೆ ಅಂತ ಡೀಲ್ ಮಾಡಿಕೊಳ್ಳುತ್ತಾರೆ. ಆ ಬೇರೆ ಪಕ್ಷದ ಪೆದ್ದು ನಾಯಕರು ಅದುವರೆಗೆ ಆ ನಿರ್ದಿಷ್ಟ ಕ್ಷೇತ್ರದಲ್ಲಿ ನಿಷ್ಠೆಯಿಂದ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿ ವಲಸೆ ಬಂದ ನಾಯಕನಿಗೆ ಟಿಕೆಟ್ ನೀಡುತ್ತಾರೆ. ದತ್ತಾ ಅವರ ವಿಷಯದಲ್ಲೂ ಅದೇ ಆಗಿದ್ದು. ಅದರೆ ವ್ಯತ್ಯಾಸವೇನೆಂದರೆ ಕಾಂಗ್ರೆಸ್, ದತ್ತಾಗೆ ಟಿಕೆಟ್ ನೀಡಲಿಲ್ಲ.

ಇದರಿಂದ ಬೇಸತ್ತ ಅನ್ನುವುದಕ್ಕಿಂತ ಕಂಗೆಟ್ಟ ದತ್ತಾ ವಾಪಸ್ಸು ಜೆಡಿಎಸ್ ಕದತಟ್ಟಿದ್ದಾರೆ. ನಾಯಕರ ಭಯಂಕರ ಕೊರತೆ ಅನುಭವಿಸುತ್ತಿರುವ ಜೆಡಿಎಸ್ ಅವರನ್ನು ಬರಮಾಡಿಕೊಂಡಿದೆ ಮತ್ತು ಕಡೂರು ಟಿಕೆಟ್ ನೀಡಿದರೂ ಆಶ್ಚರ್ಯವಿಲ್ಲ. ವಿಷಾದಕರ ಸಂಗತಿಯೆಂದರೆ ಬದಲಾಗುತ್ತಿರುವ ರಾಜಕೀಯ ವಿದ್ಯಮಾನಗಳಲ್ಲಿ ದತ್ತಾರಂಥ ನಾಯಕರು ಸಹ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುತ್ತಿರುವುದು. ಇಲ್ಲಿ ತತ್ವ ಸಿದ್ಧಾಂತಗಳಿಗೆ ಬೆಲೆ ಇಲ್ಲ, ಬೆಲೆ ಇರೋದಾದ್ರೆ ಟಿಕೆಟ್ ಗೆ ಮಾತ್ರ. ಜೈ ಕನ್ನಡಾಂಬೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on