Karnataka Assembly Polls; ಕಾಂಗ್ರೆಸ್ ಪಕ್ಷ ಸೇರುವ ಇಚ್ಛೆಯೊಂದಿಗೆ ಬಂದಿದ್ದ ಜಿಟಿ ದೇವೇಗೌಡ ಸ್ವಲ್ಪ ಸಮಯ ನನ್ನೊಂದಿಗೆ ತಿರುಗಾಡಿದರು: ಸಿದ್ದರಾಮಯ್ಯ
ಆದರೆ, ಬಂದವರು ಬಂದ ಹಾಗೆಯೇ ವಾಪಸ್ಸು ಹೋಗಿ ಪುನಃ ಜೆಡಿಎಸ್ ಪಕ್ಷಕ್ಕೆ ಸೇರಿಕೊಂಡು ಈಗ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕುಹುಕವಾಡಿದರು.
ಮೈಸೂರು: ಚಾಮುಂಡೇಶ್ವರಿಯಲ್ಲಿ ಇಂದು ವೇದಿಕೆ ಕೆಳಗೆ ಕೋಪಾವಿಷ್ಟರಾಗಿದ್ದ ಸಿದ್ದರಾಮಯ್ಯ (Siddaramaiah) ವೇದಿಕೆ ಮೇಲೆ ಶಾಂತಚಿತ್ತರಾಗಿ ತಮ್ಮ ಎಂದಿನ ಹಾಸ್ಯಭರಿತ ಮಾತುಗಳಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಜಿಟಿ ದೇವೇಗೌಡರ (GT Devegowda) ಕಾಲೆಳೆದರು. ಜಿಟಿಡಿ ಉನ್ನತ ವ್ಯಾಸಂಗ ಪೂರೈಸಿದ್ದಕ್ಕಾಗಿ ಅವರನ್ನು ಉನ್ನತ ಶಿಕ್ಷಣ ಸಚಿವನನ್ನಾಗಿ (higher education minister) ಮಾಡಲಾಗಿತ್ತು ಅಂತ ಸಿದ್ದರಾಮಯ್ಯ ಗೇಲಿಮಾಡಿದರು. ಜಿಟಿಡಿ ಕಾಂಗ್ರೆಸ್ ಪಕ್ಷ ಸೇರುವ ಬಯಕೆಯೊಂದಿಗೆ ತನ್ನಲ್ಲಿಗೆ ಬಂದಿದ್ದರು ಮತ್ತು ಕೆಲ ಸಮಯದವರೆಗೆ ತಮ್ಮ ಜೊತೆ ತಿರುಗಾಡಿದರು ಅಂತ ಸಿದ್ದರಾಮಯ್ಯ ಹೇಳಿದರು. ಆದರೆ, ಬಂದವರು ಬಂದ ಹಾಗೆಯೇ ವಾಪಸ್ಸು ಹೋಗಿ ಪುನಃ ಜೆಡಿಎಸ್ ಪಕ್ಷಕ್ಕೆ ಸೇರಿಕೊಂಡು ಈಗ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಅವರು ಕುಹುಕವಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos