Sony WH-CH520: ಸಿನಿಮಾ ನೋಡಲು, ಸಂಗೀತ ಕೇಳಲು ಬೆಸ್ಟ್ ಸೋನಿ ಹೆಡ್ಫೋನ್
ಮ್ಯೂಸಿಕ್, ಸ್ಪೀಕರ್ ಮತ್ತು ಆಡಿಯೋ ಲೋಕದ ಜನಪ್ರಿಯ ಬ್ರ್ಯಾಂಡ್ ಸೋನಿ, ಹೊಸ WH-CH520 ವೈರ್ಲೆಸ್ ಹೆಡ್ಫೋನ್ ಬಿಡುಗಡೆ ಮಾಡಿದೆ. ನೂತನ ಹೆಡ್ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ
ಮ್ಯೂಸಿಕ್ ಇಲ್ಲದೆ ಇಂದಿನ ಯುವಜನತೆ ದಿನ ಕಳೆಯುವುದೇ ಇಲ್ಲ. ಒಂದಲ್ಲ ಒಂದು ಸಂದರ್ಭದಲ್ಲಿ ದಿನದ ಕಲೆವು ಕ್ಷಣಗಳನ್ನು ಸಂಗೀತ ಕೇಳುವುದರಲ್ಲಿ ಯುವಜನತೆ ಕಳೆಯುತ್ತಾರೆ. ಮ್ಯೂಸಿಕ್ ಮಾತ್ರವಲ್ಲದೆ, ಸಿನಿಮಾ ನೋಡುವುದು, ಒಟಿಟಿ ವೇದಿಕೆಗಳಲ್ಲಿ ಕಾಲ ಕಳೆಯುವುದು ಕೂಡ ಯುವಜನತೆಯ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಇಂದು ವಿವಿಧ ಗಾತ್ರ ಮತ್ತು ವಿನ್ಯಾಸದ ಹೆಡ್ಫೋನ್, ಇಯರ್ಫೋನ್ ಲಭ್ಯವಿದೆ. ಅದರಲ್ಲೂ, ಓವರ್ ದಿ ಇಯರ್, ಓವರ್ ದಿ ಹೆಡ್ ವಿನ್ಯಾಸಗಳು ಜನಪ್ರಿಯತೆ ಗಳಿಸಿವೆ. ಮ್ಯೂಸಿಕ್, ಸ್ಪೀಕರ್ ಮತ್ತು ಆಡಿಯೋ ಲೋಕದ ಜನಪ್ರಿಯ ಬ್ರ್ಯಾಂಡ್ ಸೋನಿ, ಹೊಸ WH-CH520 ವೈರ್ಲೆಸ್ ಹೆಡ್ಫೋನ್ ಬಿಡುಗಡೆ ಮಾಡಿದೆ. ನೂತನ ಹೆಡ್ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ. ಜನಪ್ರಿಯ ಬ್ರ್ಯಾಂಡ್ ಸೋನಿ WH-CH520 ವೈರ್ಲೆಸ್ ಹೆಡ್ಫೋನ್ ಬಿಡುಗಡೆ ಮಾಡಿದ್ದು, ಆನ್ಲೈನ್ ಮತ್ತು ಪ್ರಮುಖ ರಿಟೇಲ್ ಸ್ಟೋರ್ಗಳಲ್ಲಿ ಲಭ್ಯವಿದೆ. ಸೋನಿ WH-CH520 ವೈರ್ಲೆಸ್ ಹೆಡ್ಫೋನ್ ಬೆಲೆ ₹4,490 ಇದ್ದು, ಕಪ್ಪು, ಬಿಳಿ ಮತ್ತು ಬೀಜ್ ಬಣ್ಣದಲ್ಲಿ ಲಭ್ಯವಿದೆ. ಸೋನಿ WH-CH520 ಯುಎಸ್ಬಿ ಟೈಪ್-ಸಿ ಚಾರ್ಜಿಂಗ್ ಬೆಂಬಲ ಹೊಂದಿದೆ. ಸೋನಿ ಹೆಡ್ಫೋನ್ ಆನ್ ಇಯರ್ ಹೆಡ್ಫೋನ್ ವಿನ್ಯಾಸದಲ್ಲಿದ್ದು, Bluetooth 5.2 ವೈರ್ಲೆಸ್ ಕನೆಕ್ಟಿವಿಟಿ ಹೊಂದಿದೆ. ಜತೆಗೆ ಸೋನಿ WH-CH520 ಪೂರ್ತಿ ಚಾರ್ಜ್ ಆದರೆ 50 ಗಂಟೆಗಳ ಬ್ಯಾಟರಿ ಬಾಳಿಕೆ ಬರಲಿದೆ.
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
