AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reliance Jio 5G services: ಜಿಯೋ 5ಜಿ ಡೌನ್‌ಲೋಡ್‌ ವೇಗದಲ್ಲಿ ಮೈಲಿಗಲ್ಲು, ಬಳಕೆದಾರರಿಗೆ 315ಎಂಬಿಪಿಎಸ್‌ ಉತ್ತಮ ಸ್ಪೀಡ್‌ ಲಭ್ಯ: ಓಪನ್ ಸಿಗ್ನಲ್

5ಜಿ ವೇಗ, ಟವರ್, ಕವರೇಜ್ ಮತ್ತು ತಾಂತ್ರಿಕ ನಿಯತಾಂಕಗಳ ಪ್ರತಿಯೊಂದು ಅಂಶದಲ್ಲೂ ಜಿಯೋ ಅಗ್ರಸ್ಥಾನದಲ್ಲಿದೆ ಎಂಬುದು ಸ್ಪಷ್ಟವಾಗಿದೆ. ಹಾಗೆಯೇ, 5ಜಿ ಅಪ್‌ಲೋಡ್‌ನಲ್ಲಿ ಏರ್‌ಟೆಲ್ 23.9 ಎಮ್‌ಬಿಪಿಎಸ್‌ ವೇಗದೊಂದಿಗೆ ಮುಂದಿದೆ.

Reliance Jio 5G services: ಜಿಯೋ 5ಜಿ ಡೌನ್‌ಲೋಡ್‌ ವೇಗದಲ್ಲಿ ಮೈಲಿಗಲ್ಲು, ಬಳಕೆದಾರರಿಗೆ 315ಎಂಬಿಪಿಎಸ್‌ ಉತ್ತಮ ಸ್ಪೀಡ್‌ ಲಭ್ಯ: ಓಪನ್ ಸಿಗ್ನಲ್
ಜಿಯೋ 5ಜಿ ಡೌನ್‌ಲೋಡ್‌ ವೇಗದಲ್ಲಿ ಮೈಲಿಗಲ್ಲು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Apr 14, 2023 | 11:34 AM

Share

ನವದೆಹಲಿ: ರಿಲಯನ್ಸ್ ಜಿಯೋ (Reliance Jio) ಕಂಪನಿ 5ಜಿ ಅದ್ಭುತ ವೇಗದಲ್ಲಿ (5G services) ಕಾರ್ಯನಿರ್ವಹಿಸುತ್ತಿದೆ. ಜಿಯೋ ಬಳಕೆದಾರರು 315.3 ಎಮ್‌ಬಿಪಿಎಸ್‌ ಸೂಪರ್ ಡೌನ್‌ಲೋಡ್ ವೇಗವನ್ನು ಪಡೆಯುತ್ತಿದ್ದಾರೆ. ಏರ್‌ಟೆಲ್ ಈ ಸ್ಪರ್ಧೆಯಲ್ಲಿ ಹಿಂದೆ ಬಿದ್ದಂತೆ ಕಾಣುತ್ತಿದೆ. ಏರ್‌ಟೆಲ್‌ನ 5ಜಿ ಸರಾಸರಿ ಡೌನ್‌ಲೋಡ್ ವೇಗವು 261.2 ಎಮ್‌ಬಿಪಿಎಸ್‌ ದಾಖಲಾಗಿದೆ ಎಂದು ಓಪೆನ್‌ ಸಿಗ್ನೆಲ್‌ ಮೊಬೈಲ್‌ ನೆಟ್‌ವರ್ಕ್‌ ಎಕ್ಸ್‌ಪಿರಿಯನ್ಸ್‌ ಸಂಸ್ಥೆಯ ವರದಿಯಲ್ಲಿ ಬಹಿರಂಗಪಡಿಸಲಾಗಿದೆ. 5ಜಿ ವೇಗದ ಜೊತೆಗೆ 5ಜಿ ಕವರೇಜ್‌ನಲ್ಲಿ ಜಿಯೋ (reliance jio 5G download) ತನ್ನ ಪ್ರತಿಸ್ಪರ್ಧಿ ಏರ್‌ಟೆಲ್‌ಗಿಂತ ಸುಮಾರು 3 ಪಟ್ಟು ಮುಂದಿದೆ. ಜಿಯೋ ಬಳಕೆದಾರರು ತಮ್ಮ ಸಮಯದ 32.5 ಪ್ರತಿಶತವನ್ನು 5ಜಿ ನೆಟ್‌ವರ್ಕ್‌ನಲ್ಲಿ ಕಳೆಯುತ್ತಿದ್ದರೆ, ಏರ್‌ಟೆಲ್ ಕೇವಲ 11.4 ಪ್ರತಿಶತವನ್ನು ಹೊಂದಿದೆ. ಬಳಕೆದಾರರು ಪ್ರಸ್ತುತ 4ಜಿ ಮತ್ತು 5ಜಿ ನೆಟ್‌ವರ್ಕ್‌ಗಳನ್ನು ಬಳಸುತ್ತಿರುವುದರಿಂದ, ಕವರೇಜ್ ಅನ್ನು ಅಳೆಯಲು 5ಜಿ ನೆಟ್‌ವರ್ಕ್‌ಗಳಲ್ಲಿ ಬಳಕೆದಾರರು ಕಳೆಯುವ ಸಮಯವನ್ನು ಓಪೆನ್‌ಸಿಗ್ನೆಲ್‌ ಬಳಸಿದೆ.

ಜಿಯೋ 5ಜಿ ನೆಟ್‌ವರ್ಕ್ ಅನ್ನು ಅತ್ಯಂತ ವೇಗವಾಗಿ ವಿಸ್ತರಿಸುತ್ತಿದೆ ಎಂದು ಓಪನ್ ಸಿಗ್ನಲ್ ವರದಿ ಬಹಿರಂಗಪಡಿಸಿದೆ. ಜಿಯೋ ದೊಡ್ಡ ಪ್ರಮಾಣದಲ್ಲಿ ಟವರ್‌ಗಳಲ್ಲಿ 5ಜಿ ಉಪಕರಣಗಳನ್ನು ಇನ್‌ಸ್ಟಾಲ್‌ ಮಾಡಲಿದೆ. ನಿಸ್ಸಂಶಯವಾಗಿ, ಇದರಿಂದಾಗಿ, 5ಜಿ ನೆಟ್‌ವರ್ಕ್‌ನ ವ್ಯಾಪ್ತಿಯೂ ಸಾಕಷ್ಟು ಹೆಚ್ಚಾಗಿದೆ. 1 ರಿಂದ 10 ಅಂಕಗಳ ಆಧಾರದ ಮೇಲೆ, ಓಪೆನ್‌ಸಿಗ್ನೆಲ್‌ ರಿಲಯನ್ಸ್ ಜಿಯೋಗೆ 4.2 ಅಂಕಗಳನ್ನು ನೀಡಿದೆ. ಆದರೆ ಏರ್‌ಟೆಲ್ ಕೇವಲ 3.4 ಅಂಕಗಳನ್ನು ಪಡೆದುಕೊಂಡಿದೆ. ತಾಂತ್ರಿಕ ನಿಯತಾಂಕಗಳಲ್ಲಿಯೂ ಸಹ ಜಿಯೋ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಜಿಯೋದ ‘ಕೋರ್’ ಎಲ್ಲಾ ಪರೀಕ್ಷೆಗಳಲ್ಲಿ 84.3% ಅಂಕಗಳನ್ನು ಗಳಿಸಿದೆ. ಏರ್‌ಟೆಲ್ ಶೇ.77.5 ಅಂಕಗಳನ್ನು ಪಡೆದಿದೆ.

5ಜಿ ವೇಗ, ಟವರ್, ಕವರೇಜ್ ಮತ್ತು ತಾಂತ್ರಿಕ ನಿಯತಾಂಕಗಳ ಪ್ರತಿಯೊಂದು ಅಂಶದಲ್ಲೂ ಜಿಯೋ ಅಗ್ರಸ್ಥಾನದಲ್ಲಿದೆ ಎಂಬುದು ಸ್ಪಷ್ಟವಾಗಿದೆ. ಹಾಗೆಯೇ, 5ಜಿ ಅಪ್‌ಲೋಡ್‌ನಲ್ಲಿ ಏರ್‌ಟೆಲ್ 23.9 ಎಮ್‌ಬಿಪಿಎಸ್‌ ವೇಗದೊಂದಿಗೆ ಮುಂದಿದೆ. ಜಿಯೋದ 5ಜಿ ಅಪ್‌ಲೋಡ್ ವೇಗವನ್ನು 18 ಎಮ್‌ಬಿಪಿಎಸ್‌ ಅಳೆಯಲಾಗಿದೆ. ಹಾಗೆಯೇ, ಧ್ವನಿ, ವೀಡಿಯೊ ಮತ್ತು ಗೇಮಿಂಗ್‌ನಲ್ಲಿ ಈ ಎರಡೂ ಕಂಪನಿಗಳ ಬಳಕೆದಾರರ ಅನುಭವವು ಬಹುತೇಕ ಒಂದೇ ಆಗಿರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:30 am, Fri, 14 April 23

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್