ವಿರಾಜಪೇಟೆ: ಮೊಟ್ಟೆಗಳ ತಿಂದು ಕೋಳಿಯ ಕಚ್ಚಿ ಕೊಂದಿದ್ದ ನಾಗರ ಹಾವು ಸೆರೆ ಸಿಕ್ಕಿತು
ಮೊಟ್ಟೆಗಳನ್ನ ತಿಂದು ಕೋಳಿಯನ್ನು ಕೊಂದಿದ್ದ ಬೃಹತ್ ನಾಗರ ಹಾವನ್ನು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಮೈಲಾಪುರ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.
ಮೊಟ್ಟೆಗಳನ್ನ ತಿಂದು ಕೋಳಿಯನ್ನು ಕೊಂದಿದ್ದ ಬೃಹತ್ ನಾಗರ ಹಾವನ್ನು (cobra) ಸೆರೆಹಿಡಿಯಲಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಮೈಲಾಪುರ ಗ್ರಾಮದಲ್ಲಿ (Siddapur, Virajpet Taluk, Kodagu) ಈ ಘಟನೆ ನಡೆದಿದೆ. ಕೋಳಿ (chicken) ಗೂಡಿಗೆ ನುಗ್ಗಿದ ನಾಗರ ಮೊದಲು ಕೋಳಿಯನ್ನು ಕಚ್ಚಿ ಕೊಂದಿದೆ. ಬಳಿಕ ನಾಲ್ಕು ಮೊಟ್ಟೆಗಳನ್ನು (eggs) ಭಕ್ಷಿಸಿ, ಅಲ್ಲಿಯೇ ಅವಿತಿದೆ.
ನಾಗರ ಹಾವಿನ ಬಗ್ಗೆ ಅರಿತ ಮನೆಯವರು ಉರಗ ರಕ್ಷಕ ಸ್ನೇಕ್ ಸುರೇಶ್ ಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಸುರೇಶ್ ಸುಮಾರು ಅರ್ಧ ಗಂಟೆ ಕಾಲ ಸಾಹಸಪಟ್ಟು ಆರು ಅಡಿ ಉದ್ದದ ಹಾವನ್ನು ಸೆರೆ ಹಿಡಿದರು. ಬಳಿಕ ಹಾವನ್ನು ಮಾಲ್ದಾರೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟುಬರಲಾಯಿತು (rescue).
ಇದನ್ನೂ ಓದಿ: ಫಿನಾಯಿಲ್ ವಾಸನೆಗೆ ಕಾರಿನಲ್ಲಿ ಮೂರ್ಛೆ ತಪ್ಪಿದ್ದ ನಾಗರಹಾವು: ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ