My India My Life Goals: ಹಸಿರೇ ಉಸಿರು ಅಂತ ಬಲವಾಗಿ ನಂಬಿರುವ ಚಂಡೀಗಢ್​ದ ಒಬ್ಬ ಕಾನ್​ಸ್ಟೇಬಲ್ ಪ್ರತಿವರ್ಷ 25 ಸಾವಿರ ಸಸಿ ನೆಡುತ್ತಾರೆ!

|

Updated on: Jun 23, 2023 | 10:38 AM

ಸಸಿ ನೆಡುವುದು ಕೇವಲ ತನ್ನೊಬ್ಬನ ಕರ್ತವ್ಯ ಮಾತ್ರ ಅಲ್ಲ, ಅದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ, ಸಸಿ ನೆಡಿ ಪರಿಸರ ಕಾಪಾಡಿ ಎಂಬ ಧ್ಯೇಯವಾಕ್ಯವನ್ನು ಅವರು ಸಾರುತ್ತಾರೆ.

ಬೆಂಗಳೂರು: ವಿಶ್ವದ ಪರಿಸರ ಹಾಳಾಗದ ಹಾಗೆ ಸಂರಕ್ಷಿಸಲು ಹಲವಾರು ಸಂಘಸಂಸ್ಥೆಗಳು (organisations, NGOs) ಟೊಂಕಕಟ್ಟಿ ನಿಂತಿವೆ. ಆದರೆ ಕೆಲವರು ವೈಯಕ್ತಿಕವಾಗಿ ಮಹಾಕಾರ್ಯದಲ್ಲಿ ತೊಡಗಿ ಬೇರೆಯರಿಗೂ ಪ್ರೇರಣೆಯಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಒಬ್ಬ ಪೇದೆಯಾಗಿ (police constable) ಸೇವೆ ಸಲ್ಲಿಸುತ್ತಿರುವ ಈ ಮಹಾನುಭಾವ ಹೇಳೋದನ್ನು ಕೇಳಿಸಿಕೊಳ್ಳಿ. 2011 ರಲ್ಲಿ ಚಂಡೀಗಢ್ ಪೊಲೀಸ್ ಇಲಾಖೆಯಲ್ಲಿ ಕಾನ್ ಸ್ಟೇಬಲ್ ಆಗಿ ಸೇವೆ ಆರಂಭಿಸಿದ ಇವರು ಅಲ್ಲಿಯ ಹಸಿರು, ಸುತ್ತಲಿನ ವಾತಾವರಣ ಕಂಡು ಇಂಪ್ರೆಸ್ ಆಗುವುದರ ಜೊತೆ ಪ್ರೇರಿತರೂ ಆಗಿದ್ದಾರೆ. ಆಗಲೇ ಅವರಲ್ಲಿ ಈ ಭೂಮಿಗೆ, ಪರಿಸರಕ್ಕೆ ತನ್ನಿಂದ ಏನಾದರೂ ಕೊಡುಗೆ ನೀಡಬೇಕು ಅನ್ನೋ ಉತ್ಕಟ ಆಸೆ ಮೊಳಕೆಯೊಡೆದಿದೆ. ತಾವಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲು ಅವರು ಮೊದಲು ಯುವಕರನ್ನು ಒಂದೆಡೆ ಸೇರಿಸಿದ್ದಾರೆ. ಅವರ ಮೂಲಕ ಆ ಭಾಗದ ನಾನಾ ಹಳ್ಳಿಗಳಲ್ಲಿ ಪ್ರತಿವರ್ಷ 20-25 ಸಾವಿರ ಸಸಿಗಳನ್ನು ನೆಡಸುತ್ತಿದ್ದಾರೆ (plant saplings).

2020ರಲ್ಲಿ ಕೊರೋನಾ ಪೀಡೆ ಪ್ರಪಂಚವನ್ನು ಅಪ್ಪಳಿಸಿದಾಗ ಅವರ ಮನದಲ್ಲಿ ಮತ್ತೊಂದು ವಿಚಾರ ಬಂತಂತೆ. ಪ್ರತಿಯೊಂದು ಹಳ್ಳಿಯಲ್ಲಿ ಸಸ್ಯ ಸಂಕುಲ ಬೆಳೆಸಿ, ಹೆಚ್ಚಿಸಿ ಯಾಕೆ ಆಕ್ಸಿಜನ್ ಕೋಟೆಯನ್ನು ಕಟ್ಟಿಕೊಳ್ಳಬಾರದು ಅನ್ನೋ ಆಲೋಚನೆ ಅವರಲ್ಲಿ ಹುಟ್ಟಿದೆ. ಭಾರತೀಯ ಸಸ್ಯ ಸಂಕುಲ ಕೇವಲ ಆಕ್ಸಿಜನ್ ನೀಡುವುದು ಮಾತ್ರವಲ್ಲದೆ ಪ್ರಾಣಿ ಸಂಕುಲಕ್ಕೂ ಆಸರೆಯಾಗಿ ನಿಲ್ಲುತ್ತದೆ. ಹಳ್ಳಿಯ ಜನರು ಅವರ ಯೊಜನೆಯಲ್ಲಿ ಅಷ್ಟೇ ಉತ್ಸಾಹದಿಂದ ಭಾಗವಹಿಸಿದ್ದಾರೆ.

ಅದೆಲ್ಲದರ ಪರಿಣಾಮವಾಗೇ ಸಸಿ ನೆಟ್ಟು ಸಂರಕ್ಷಿಸುತ್ತಾ ಬೆಳಸುವುದು ಜನಾಂದೋಲನವಾಗಿ ಪರಿವರ್ತನೆಯಾಯಿತು ಅಂತ ಅವರು ಹೇಳುತ್ತಾರೆ. ಸಸಿ ನೆಡುವುದು ಕೇವಲ ತನ್ನೊಬ್ಬನ ಕರ್ತವ್ಯ ಮಾತ್ರ ಅಲ್ಲ, ಅದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ, ಸಸಿ ನೆಡಿ ಪರಿಸರನ್ನು ಕಾಪಾಡಿ ಎಂಬ ಧ್ಯೇಯವಾಕ್ಯವನ್ನು ಅವರು ಸಾರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:57 pm, Wed, 7 June 23

Follow us on