My India My Life Goals: ಪ್ರತಿದಿನವನ್ನು ವಿಶ್ವ ಪರಿಸರ ದಿನವನ್ನಾಗಿಸಿದರೆ ಭಾರತ ಹಸಿರಿನಿಂದ ಕಂಗೊಳಿಸುತ್ತದೆ: ದೇವೆಂದರ್ ಸುರಾ, ಪೊಲೀಸ್ ಕಾನ್ ಸ್ಟೇಬಲ್
ನಮ್ಮ ದಿನಚರಿಯನ್ನು ಹೀಗೆ ಬದಲಾಯಿಸಿಕೊಂಡರೆ ಭಾರತ ದೇಶ ಹಸಿರಿನಿಂದ ಕಂಗೊಳಿಸುತ್ತದೆ, ಪ್ರತಿ ದಿನವೂ ಪರಿಸರ ದಿನವಾಗಿರುತ್ತದೆ ಎಂದು ದೇವೆಂದರ್ ಸುರಾ ಹೇಳುತ್ತಾರೆ.
ಬೆಂಗಳೂರು: ಹರಿಯಾಣ ಸೋನಿಪತ್ ಮೂಲದ 31-ವರ್ಷ ವಯಸ್ಸಿನ ಪೊಲೀಸ್ ಕಾನ್ ಸ್ಟೇಬಲ್ ದೇವೆಂದರ್ ಸುರಾ (Devender Sura) ಪರಿಸರದ ಉಳಿವಿಗಾಗಿ ಏನೆಲ್ಲ ಮಾಡುತ್ತಿದ್ದಾರೆ ಅನ್ನೋದನ್ನು ನಾವು ಚರ್ಚಿಸುತ್ತಿದ್ದೇವೆ. ನಮ್ಮ ಸುತ್ತಮುತ್ತಲಿನ ಪರಿಸರ ಹೆಚ್ಚಲು ಪ್ರತಿದಿನವನ್ನು ವಿಶ್ವ ಪರಿಸರ ದಿನವನ್ನಾಗಿ (World Environment Day) ಆಚರಿಸಿ ಎಂದು ಅವರು ಹೇಳುತ್ತಾರೆ. ಸುತ್ತಲಿನ ಪರಿಸರದಲ್ಲಿ ಗಿಡ ನೆಡಬೇಕು ಪ್ರಾಣಿ-ಪಕ್ಷಿಗಳೊಂದಿಗೆ (animals) ಸ್ನೇಹ ಬೆಳಸಬೇಕು ಎಂದು ಹೇಳುವ ಅವರು ದೇಶಗಳಲ್ಲಂತೆ ನಮ್ಮ ದೇಶದಲ್ಲೂ ಹೆಚ್ಚೆಚ್ಚಾಗಿ ಸೈಕಲ್ ಬಳಕಸಬೇಕು ಎನ್ನುತ್ತಾರೆ. ನಾವು ವಾಸ ಮಾಡುವ ಸ್ಥಳ, ಪ್ರದೇಶದಲ್ಲಿ ತ್ಯಾಜ್ಯಮುಕ್ತ ಪರಿಸರ ನಿರ್ಮಿಸಿಕೊಳ್ಳಲು ಸುರಾ ಆಗ್ರಹಿಸುತ್ತಾರೆ.
ನಮ್ಮ ದಿನಚರಿಯನ್ನು ಹೀಗೆ ಬದಲಾಯಿಸಿಕೊಂಡರೆ ಭಾರತ ದೇಶ ಹಸಿರಿನಿಂದ ಕಂಗೊಳಿಸುತ್ತದೆ, ಪ್ರತಿ ದಿನವೂ ಪರಿಸರ ದಿನವಾಗಿರುತ್ತದೆ ಎಂದು ದೇವೆಂದರ್ ಸುರಾ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ